ಕರ್ನಾಟಕ

karnataka

ETV Bharat / state

ಚಾಲಕರಿಂದ ಅಕ್ರಮವಾಗಿ ಹಣ ಪಡೆದ ಟ್ರಾಫಿಕ್ ಪೊಲೀಸರು.. ಅವರಿಗೆ ಬಿತ್ತು ಎಫ್ಐಆರ್ ಬಿಸಿ.. - ಪಾನಮತ್ತ ಚಾಲನೆ ಪ್ರಕರಣ ದಾಖಲಿಸುವ ನೆಪದಲ್ಲಿ ಅಕ್ರಮ ಹಣ ಪಡೆದ ಟ್ರಾಫಿಕ್ ಪೊಲೀಸರು

ಪಾನಮತ್ತ ಚಾಲನೆ ಪ್ರಕರಣ ದಾಖಲಿಸುವ ನೆಪದಲ್ಲಿ ಕಾನೂನು ಬಾಹಿರವಾಗಿ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ ಅಶೋಕ ನಗರ ಸಂಚಾರಿ ಠಾಣೆಯ ಎಎಸ್‌ಐ ಹಾಗೂ ಮೂವರು ಸಿಬ್ಬಂದಿ ಮೇಲೆ ವಿವೇಕ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

traffic-police-illegally-collect-the-money-from-drivers-in-bengalore
ಚಾಲಕರಿಂದ ಅಕ್ರಮವಾಗಿ ಹಣ ಪಡೆದ ಟ್ರಾಫಿಕ್ ಪೊಲೀಸರು..

By

Published : Dec 16, 2019, 11:32 PM IST

ಬೆಂಗಳೂರು: ಪಾನಮತ್ತ ಚಾಲನೆ ಪ್ರಕರಣ ದಾಖಲಿಸುವ ನೆಪದಲ್ಲಿ ಕಾನೂನು ಬಾಹಿರವಾಗಿ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ ಅಶೋಕ ನಗರ ಸಂಚಾರಿ ಠಾಣೆಯ ಎಎಸ್‌ಐ ಹಾಗೂ ಮೂವರು ಸಿಬ್ಬಂದಿ ಮೇಲೆ ವಿವೇಕ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಶೋಕನಗರ ಸಂಚಾರ ಠಾಣೆಯ ಎಎಸ್‌ಐ ಮುನಿಯಪ್ಪ ಹಾಗೂ ಸಿಬ್ಬಂದಿ ಗಂಗರಾಜ್, ನಾಗರಾಜ್ ಮತ್ತು ಹರ್ಷರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಖಾಸಗಿ ಆಲ್ಕೋ ಮೀಟರ್‌ಗಳನ್ನು ಬಳಸಿ, ಪಾನಮತ್ತ ಚಾಲಕರನ್ನು ಅಡ್ಡಗಟ್ಟಿ, ಅವರಿಗೆ ನ್ಯಾಯಾಲಯಕ್ಕೆ ಹೋದರೆ 15 ಸಾವಿರ ದಂಡ ಕಟ್ಟಬೇಕಾಗುತ್ತದೆ ಎಂದು ಬೆದರಿಸಿ, ಹಾಗೆಯೇ ನಿಮ್ಮ ವಾಹನ ಸೀಜ್ ಮಾಡಬೇಕಾಗುತ್ತದೆ ಎಂದು ಹೆದರಿಸಿ ಪೇಟಿಎಂ ಮೂಲಕ ಹಣ ಪಡೆಯುತ್ತಿದ್ದ ವೇಳೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ವಿಶೇಷ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.

ಈ ವೇಳೆ ವಾಹನ ಚಾಲಕರಿಂದ ಪಡೆದಿದ್ದ 32 ಸಾವಿರ ರೂ.ನಗದು, ಮೂರು ಖಾಸಗಿ ಆಲ್ಕೋಹಾಲ್ ಮೀಟರ್‌ಗಳು, ಚಾಲಕರ ಡಿಎಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ‌ ಸಿಬ್ಬಂದಿಯನ್ನು ನಗರ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಅಮಾನತು ಮಾಡಿದ್ದರು.

For All Latest Updates

TAGGED:

ABOUT THE AUTHOR

...view details