ಕರ್ನಾಟಕ

karnataka

ETV Bharat / state

ಚಾಲಕನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಥಳಿಸಿದ ಸಂಚಾರಿ ಪೊಲೀಸ್: ವಿಡಿಯೋ ವೈರಲ್​ - ಸಿಟಿ ಮಾರುಕಟ್ಟೆ

ಬೆಂಗಳೂರಿನ ಸಿಟಿ ಮಾರುಕಟ್ಟೆಯ ಮೇಲ್ಸೇತುವೆ​ ಬಳಿ ಏಕಮುಖ ರಸ್ತೆಯಲ್ಲಿ ತೆರಳುವಂತೆ ಸಂಚಾರಿ ಪೊಲೀಸ್​​ ಪೇದೆ ಹೇಳಿದ್ದರು ಎನ್ನಲಾಗ್ತಿದೆ. ಟೆಂಪೋ ಚಾಲಕ ಸುನೀಲ್​ ಆ ಮಾರ್ಗವಾಗಿ ತೆರಳಿದಾಗ ಮತ್ತೋರ್ವ ಸಂಚಾರಿ ಪೊಲೀಸ್​ ಆ ಚಾಲಕನನ್ನು ಅವಾಚ್ಯ ಪದಗಳಿಂದ ನಿಂದಿಸಿ, ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಡಿಯೋ ವೈರಲ್​ ಆಗಿದೆ.

ಚಾಲಕನನ್ನು ಥಳಿಸಿದ ಸಂಚಾರಿ ಪೊಲೀಸ್​

By

Published : Sep 20, 2019, 8:23 PM IST

Updated : Sep 22, 2019, 1:14 PM IST

ಬೆಂಗಳೂರು: ಸಿಟಿ ಮಾರುಕಟ್ಟೆ ಫ್ಲೈ ಓವರ್​ ಬಳಿ ಟ್ರಾಫಿಕ್​ ಪೊಲೀಸ್​ ಒನ್​ ವೇನಲ್ಲಿ ಹೋಗುವಂತೆ ಟೆಂಪೋ ಚಾಲಕನಿಗೆಸೂಚಿಸಿದ್ದರು ಎನ್ನಲಾಗ್ತಿದೆ. ಅದರಂತೆ ಟೆಂಪೋ ಚಾಲಕ ಹೋಗಿದ್ದಕ್ಕೆ ಮತ್ತೋರ್ವ ಟ್ರಾಫಿಕ್​ ಪೊಲೀಸ್​ ಬಂದು ವಾಹನವನ್ನು ಅಡ್ಡಗಟ್ಟಿ ಕಪಾಳ ಮೋಕ್ಷ ಮಾಡಿದ್ದಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಚಾಲಕನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಥಳಿಸಿದ ಸಂಚಾರಿ ಪೊಲೀಸ್

ನನ್ನದೇನು ತಪ್ಪಿಲ್ಲವೆಂದು ಚಾಲಕ ಸುನೀಲ್​ ಹೇಳಿದರೂ ಅದನ್ನು ಕೇಳದೇ ಟ್ರಾಫಿಕ್ ಪೊಲೀಸ್​ ನಿಂದಿಸಿ, ಥಳಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದ್ರೆ ನಿಜಕ್ಕೂ ಅಲ್ಲಿ ನಡೆದಿದ್ದೇನು ಎಂಬುದರ ಬಗ್ಗೆ ಪೂರ್ಣ ಮಾಹಿತಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ತಿಳಿದುಬರಬೇಕಿದೆ.

Last Updated : Sep 22, 2019, 1:14 PM IST

ABOUT THE AUTHOR

...view details