ಬೆಂಗಳೂರು :ಬಿಬಿಎಂಪಿ ಪೌರ ಕಾರ್ಮಿಕರ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೆಜೆ ನಗರದ ಬಳಿ ಟ್ರಾಫಿಕ್ ಪೊಲೀಸ್ನಿಂದ ಹಲ್ಲೆ ನಡೆದಿದ್ದು, ರಸ್ತೆಯಲ್ಲಿ ಕಸದ ವಾಹನ ನಿಲ್ಲಿಸಿದಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ಬಿಬಿಎಂಪಿ ಪೌರ ಕಾರ್ಮಿಕನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ಖಂಡಿಸಿ ಪ್ರತಿಭಟನೆ - civilian worker Protest in Bangalore
ರಸ್ತೆಯಲ್ಲಿ ವಾಹನ ನಿಲ್ಲಿಸಿ ಕಸವನ್ನ ತುಂಬುತ್ತಿದ್ದ ಪೌರ ಕಾರ್ಮಿಕನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ಮಾಡಿದ್ದು ಸರಿ ಅಲ್ಲ. ರಸ್ತೆಯಲ್ಲಿ ವಾಹನ ಏಕೆ ನಿಲ್ಲಿಸಿದ್ದೀಯಾ?..
ಬಿಬಿಎಂಪಿ ಪೌರ ಕಾರ್ಮಿಕನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ಖಂಡಿಸಿ ಪ್ರತಿಭಟನೆ
ಟ್ರಾಫಿಕ್ ಪೊಲೀಸ್ರ ವರ್ತನೆ ಖಂಡಿಸಿ ಪೌರ ಕಾರ್ಮಿಕರು ಜೆಜೆ ನಗರ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ವಾಹನ ನಿಲ್ಲಿಸಿ ಕಸವನ್ನ ತುಂಬುತ್ತಿದ್ದ ಪೌರ ಕಾರ್ಮಿಕನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ಮಾಡಿದ್ದು ಸರಿ ಅಲ್ಲ. ರಸ್ತೆಯಲ್ಲಿ ವಾಹನ ಏಕೆ ನಿಲ್ಲಿಸಿದ್ದೀಯಾ?. ಟ್ರಾಫಿಕ್ ಜಾಮ್ ಆಗುತ್ತೆ ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ ಎಂದು ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated : Dec 19, 2020, 1:43 PM IST