ಕರ್ನಾಟಕ

karnataka

ETV Bharat / state

ಸಿಲಿಕಾನ್​​​ ಸಿಟಿ ವಾಹನ ಸವಾರರೇ ಹುಷಾರ್​​: ಟ್ರಾಫಿಕ್​​ ಪೊಲೀಸರು ಫುಲ್​​ ಅಲರ್ಟ್​!

ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಆದೇಶದ ಮೇರೆಗೆ ಸಿಲಿಕಾನ್ ಸಿಟಿಯ ಎಲ್ಲಾ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅಲರ್ಟ್ ಆಗಿ ಅಖಾಡಕ್ಕೆ ಇಳಿದಿದ್ದಾರೆ.

ಸಿಲಿಕಾನ್ ಸಿಟಿ

By

Published : Aug 1, 2019, 9:19 PM IST

ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಇಂದಿನಿಂದ ಅಧಿಕೃತವಾಗಿ ಜಾರಿ ಬಂದಿದ್ದು, ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಆದೇಶದ ಮೇರೆಗೆ ಸಿಲಿಕಾನ್ ಸಿಟಿಯ ಎಲ್ಲಾ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅಲರ್ಟ್ ಆಗಿ ಅಖಾಡಕ್ಕೆ ಇಳಿದಿದ್ದಾರೆ.

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಇಂದಿನಿಂದ ಅಧಿಕೃತವಾಗಿ ಜಾರಿ

ನಗರದ ಎಲ್ಲೆಡೆ ಆಯಾ ಠಾಣಾ ವ್ಯಾಪ್ತಿಯ ಸಿಬ್ಬಂದಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರರನ್ನು ಹಿಡಿದು ಮುಂಜಾನೆಯಿಂದ ದಂಡ ಹಾಕುವ ಕಾರ್ಯದಲ್ಲಿ ತೊಡಗಿದ್ದು, ಹೊಸ ನಿಯಮದ ಪ್ರಕಾರ ಮಿತಿ ಮೀರಿದ ವೇಗದ ಚಾಲನೆಗೆ 500 ರೂ.ನಿಂದ 1 ಸಾವಿರ ರೂ. ದಂಡ, ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ 1 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ.

ಅದೇ ರೀತಿ ಚಾಲನೆ ವೇಳೆ 2ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿಬಿದ್ದರೆ 2 ಸಾವಿರ ರೂ. ದಂಡ, ನೋಂದಣಿ ಇಲ್ಲದೆ ವಾಹನ ಚಲಾವಣೆ ಮಾಡಿದರೆ ಮೊದಲ ಬಾರಿಗೆ 5 ಸಾವಿರ ರೂ. ದಂಡ‌ ವಿಧಿಸಲಾಗುತ್ತದೆ.ಈ ಕುರಿತು ಆಯಾ ಠಾಣಾ ಸಿಬ್ಬಂದಿ ದಂಡ ಹಾಕುವುದರಲ್ಲಿ ತೊಡಗಿದ್ದಾರೆ.

ABOUT THE AUTHOR

...view details