ಬೆಂಗಳೂರು:ವಿಶ್ವದಲ್ಲಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಡೈನಾಮಿಕ್ ಸಿಟಿಯಾದ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಟ್ರಾಫಿಕ್ ಜಾಮ್ ದ್ವಿಗುಣವಾಗಿದ್ದು, ಒಂದು ಗಂಟೆಗೆ ಸರಾಸರಿ ವೇಗ 18.7ರಷ್ಟು ಸಂಚಾರ ನಡೆಸಲು ಸಾಧ್ಯವಾಗಲಿದೆ ಎಂದು ಅಧ್ಯಯನ ನಡೆಸಿ ಮೂವ್ಇನ್ಸಿಂಕ್ ಟ್ರಾವೆಲ್ ಟೈಮ್ ರಿಪೋರ್ಟ್ ಬಹಿರಂಗಗೊಳಿಸಿದೆ.
ಚೆನ್ನೈ ಮಂದಿ 25.7 ಕಿಲೋಮೀಟರ್ಗೆ ಒಂದು ಗಂಟೆ ತೆಗೆದುಕೊಂಡರೆ ಬೆಂಗಳೂರಿಗರು ಗಂಟೆಗೆ 18.5 ಕಿ.ಮೀ ಅಷ್ಟೇ ಸಂಚರಿಸಲು ಸಾಧ್ಯವಾಗುತ್ತಿದೆ. ಇನ್ನೂ ಹೈದರಾಬಾದ್ ಹಾಗೂ ಡೆಲ್ಲಿಯಲ್ಲಿ ಅನುಕ್ರಮವಾಗಿ ಗಂಟೆಗೆ 21.2 ಹಾಗೂ 20.6 ಕಿ.ಮೀಟರ್ ಪ್ರಯಾಣ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರವೇ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಬೇರೆ ಬೇರೆ ನಗರಗಳಲ್ಲಿ ಅನ್ಯ ದಿನಗಳಲ್ಲಿ ಟ್ರಾಫಿಕ್ ಇರಲಿದೆ. ಬುಧವಾರ ಮುಂಬೈನಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾದರೆ ದೆಹಲಿಯಲ್ಲಿ ಗುರುವಾರ ಚೆನ್ನೈ ಹಾಗೂ ಹೈದರಾಬಾದ್ ನಲ್ಲಿ ಶುಕ್ರವಾರ ಸಂಚಾರ ದಟ್ಟಣೆ ಕಾಣಬಹುದಾಗಿದೆ. ಈ ಆರು ನಗರಗಳಲ್ಲಿ ಬೆಳಗ್ಗೆ 9 ಗಂಟೆ ಹಾಗೂ ಸಂಜೆ 6 ಗಂಟೆ ನಂತರ ಬಹುಕಾಲ ರಸ್ತೆಯಲ್ಲೇ ವಾಹನ ಸವಾರರು ಸಮಯ ಕಳೆಯುತ್ತಿದ್ದಾರೆ. ಕೆಲಸಕ್ಕೆ ಹೋಗುವವರು ತಮ್ಮ ಶೇ.20ರಷ್ಟು ಸಮಯವನ್ನು ಟ್ರಾಫಿಕ್ನಲ್ಲಿ ಮುಡಿಪಿಡಬೇಕಾದ ಅನಿವಾರ್ಯ ಎದುರಾಗಿದೆ.