ನೆಲಮಂಗಲ : ದಸರಾ ಹಬ್ಬದ ಸಾಲು ಸಾಲು ರಜೆ ಹಿನ್ನೆಲೆ ರಾಜ್ಯ ರಾಜಧಾನಿಯಿಂದ ತಮ್ಮೂರುಗಳತ್ತ ಜನ ತೆರಳುತ್ತಿದ್ದಾರೆ. ಇದರಿಂದ 8ನೇ ಮೈಲಿ ನವಯುಗ ಟೋಲ್ ಬಳಿ ಸಂಚಾರ ದಟ್ಟಣೆ ಉಂಟಾಗಿದೆ.
ದಸರಾ ಹಿನ್ನೆಲೆ ತಮ್ಮೂರಿಗೆ ಹೊರಟ ಜನ: ನೆಲಮಂಗಲ ಬಳಿ ಟ್ರಾಫಿಕ್ ಜಾಮ್ - Traffic jam in Bangalore
ವಿಜಯದಶಮಿ ಹಿನ್ನೆಲೆ ಬೆಂಗಳೂರಿನಲ್ಲಿ ನೆಲೆಸಿರುವ ಜನ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಇದರಿಂದ ನೆಲಮಂಗಲ ಬಳಿ ಟ್ರಾಫಿಕ್ ಜಾಮ್ ಆಗಿದೆ.
ನೆಲಮಂಗಲ ಬಳಿ ಟ್ರಾಫಿಕ್ ಜಾಮ್
ವಿಜಯದಶಮಿ ಹಿನ್ನೆಲೆ ಕುಟುಂಬ ಸಮೇತರಾಗಿ ಜನ ಬೆಂಗಳೂರು ಬಿಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ರಾಜ್ಯದ 23ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದ್ದು, ನವಯುಗ ಟೋಲ್ ಮುಖಾಂತರವೇ ಎಲ್ಲ ವಾಹನಗಳು ಸಂಚರಿಸಬೇಕಿದೆ.
ಇದರಿಂದ ಸಂಚಾರ ದಟ್ಟಣೆ ಅಧಿಕವಾಗಿದ್ದು, ಟ್ರಾಫಿಕ್ ಜಾಮ್ನಲ್ಲಿ ಆ್ಯಂಬುಲೆನ್ಸ್ ಸಹ ಸಿಲುಕಿ ಪರದಾಡುವ ಸ್ಥಿತಿ ಎದುರಾಗಿದೆ. ಇಷ್ಟೆಲ್ಲ ಸಂಚಾರ ದಟ್ಟಣೆಯಾದರೂ ಸಹ ಪೀಣ್ಯ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.