ಕರ್ನಾಟಕ

karnataka

ETV Bharat / state

ಪುನೀತ್ ನುಡಿ ನಮನ: ಅರಮನೆ ರಸ್ತೆ ಸುತ್ತಮುತ್ತ ಸಂಚಾರದಟ್ಟಣೆ

ಅರಮನೆ ರಸ್ತೆ, ಗುಟ್ಟಹಳ್ಳಿ, ಹೆಬ್ಬಾಳ ರಸ್ತೆ,‌ ಜೆ.ಸಿ‌.ನಗರ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳದಲ್ಲೇ ಟ್ರಾಫಿಕ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರೂ ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಲ್ಲೇ ನಿಲ್ಲುವಂತಾಗಿದೆ.

ಪ್ಯಾಲೇಸ್ ರೋಡ್ ಸುತ್ತಮುತ್ತ ಟ್ರಾಫಿಕ್ ಜಾಮ್
ಪ್ಯಾಲೇಸ್ ರೋಡ್ ಸುತ್ತಮುತ್ತ ಟ್ರಾಫಿಕ್ ಜಾಮ್

By

Published : Nov 16, 2021, 3:36 PM IST

ಬೆಂಗಳೂರು:ದಿ.ಪುನೀತ್ ರಾಜ್‌ಕುಮಾರ್ ನಮನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಲನಚಿತ್ರರಂಗದ ಕಲಾವಿದರ ದಂಡೇ ಅರಮನೆ ಮೈದಾನದತ್ತ ಹರಿದು ಬರುತ್ತಿದೆ. ಹೀಗಾಗಿ, ಅರಮನೆ ಮೈದಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.


ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿರುವ 'ಪುನೀತ್ ನಮನ' ಕಾರ್ಯಕ್ರಮ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯುತ್ತಿದೆ. ಸ್ಯಾಂಡಲ್‌ವುಡ್ ಮಾತ್ರವಲ್ದೇ ಬೇರೆ ಬೇರೆ ಚಲನಚಿತ್ರ ರಂಗದ ಕಲಾವಿದರು ಆಗಮಿಸುತ್ತಿದ್ದಾರೆ.

ಪ್ಯಾಲೇಸ್ ರೋಡ್, ಗುಟ್ಟಹಳ್ಳಿ, ಹೆಬ್ಬಾಳ ರಸ್ತೆ,‌ ಜೆ.ಸಿ‌.ನಗರ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಸ್ಥಳದಲ್ಲೇ ಟ್ರಾಫಿಕ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರೂ ಕಿಲೋಮೀಟರ್ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿವೆ.

ಮತ್ತೊಂದೆಡೆ, ಸಿನಿರಂಗದ ಖ್ಯಾತನಾಮರ ಆಗಮನ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ನೀಡದಿರಲು ನಗರ ಪೊಲೀಸರು ಎಚ್ಚರವಹಿಸಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಹಾಗೂ ಸಂಚಾರ ಇಲಾಖೆಯ ಉತ್ತರ ವಿಭಾಗದ ಡಿಸಿಪಿ‌ ಸವಿತಾ ಭದ್ರತೆಯ ಉಸ್ತುವಾರಿ ಹೊಣೆ ಹೊತ್ತಿದ್ದಾರೆ. ಕೆಎಸ್ಆರ್​ಪಿ, ಸಿಎಆರ್ ತುಕಡಿಗಳು, ಪೊಲೀಸ್‌ ಇನ್ಸ್‌ಪೆಕ್ಟರ್ಸ್‌ ಸೇರಿದಂತೆ ನೂರಾರು ಸಂಖ್ಯೆಯ ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ‌.

ABOUT THE AUTHOR

...view details