ಕರ್ನಾಟಕ

karnataka

ETV Bharat / state

ಹೊಸ ವರ್ಷದ ದಿನ ಎಲ್ಲೆಲ್ಲಿ ವಾಹನಗಳಿಗೆ ಎಂಟ್ರಿ ಇದೆ ಅಥವಾ ಇಲ್ಲ: ಇಲ್ಲಿದೆ ಕಂಪ್ಲೀಟ್ ಮಾಹಿತಿ!

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ನಿಯಮ.. ಎಲ್ಲೆಲ್ಲಿ ವಾಹನಗಳಿಗೆ ಎಂಟ್ರಿ ಇದೆ ಅಥವಾ ಇಲ್ಲಾ ಎಂಬುದರ ಮಾಹಿತಿ.. - ಕುಡಿದು ವಾಹನ ಚಲಾಯಿಸಿದರೆ ಕಠಿಣ ಕ್ರಮ ಎಂದ ಪೊಲೀಸ್​ ಇಲಾಖೆ

Traffic commissioner guidelines  guidelines for new year celebrations in Bengaluru  Traffic commissioner guidelines for new year  new year celebration 2023  ಹೊಸ ವರ್ಷದ ದಿನ ಎಲ್ಲೆಲ್ಲಿ ವಾಹನಗಳಿಗೆ ಎಂಟ್ರಿ  ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ನಿಯಮ  ವಾಹನಗಳಿಗೆ ಎಂಟ್ರಿ ಇದೆ ಅಥವಾ ಇಲ್ಲಾ ಎಂಬುದರ ಮಾಹಿತಿ  ಕುಡಿದು ವಾಹನ ಚಲಾಯಿಸಿದರೆ ಕಠಿಣ ಕ್ರಮ  ಎಲ್ಲಿ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧ  ಹೊಸ ವರ್ಷದ ಸಂಭ್ರಮಾಚರಣೆ  ಕುಡಿದು ವಾಹನ ಚಲಾಯಿಸಿದರೆ ಕಠಿಣ ಕ್ರಮ  ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ ಎಂಎ ಸಲೀಂ ಎಚ್ಚರಿಕೆ
ಹೊಸ ವರ್ಷದ ದಿನ

By

Published : Dec 29, 2022, 2:32 PM IST

ಬೆಂಗಳೂರು:ಹೊಸ ವರ್ಷದ ಸಂಭ್ರಮಾಚರಣೆ ನೆಪದಲ್ಲಿ ಕುಡಿದು ವಾಹನ ಚಲಾಯಿಸಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ ಎಂಎ ಸಲೀಂ ಎಚ್ಚರಿಕೆ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯೂ ಇಯರ್ ಸೆಲೆಬ್ರೇಷನ್ ಮಾಡಿ ಜನರು ಸೇಫ್ ಆಗಿ ಮನೆಗೆ ತೆರಳಬೇಕು. ಹೆಚ್ಚು ಜನ ಸೇರುವ ಕಾರಣ ಪಬ್ಲಿಕ್ ಟ್ರಾನ್ಸ್​ಪೋರ್ಟ್​ಗಳನ್ನು ಬಳಸಬೇಕು. ಹೊಸ ವರ್ಷದ ದಿನ ರಾತ್ರಿ 2 ಗಂಟೆ ತನಕ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಸೇವೆ ಇರಲಿದೆ. ಡ್ರಂಕ್ ಅಂಡ್ ಡ್ರೈವ್, ಡ್ರಾಗ್ ರೇಸ್ ಮತ್ತು ವೀಲ್ಹಿಂಗ್ ಮಾಡುವವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿ.31 ರಾತ್ರಿ ಏರ್ಪೋರ್ಟ್ ಫ್ಲೈ ಓವರ್ ಬಿಟ್ಟು ಉಳಿದ ಎಲ್ಲ ಫ್ಲೈ ಓವರ್​ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಪ್ರಮುಖವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಹೆಚ್ಚು ಜನ ಸೇರುವ ಕಡೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇನ್ನು ನೈಸ್ ರಸ್ತೆಯಲ್ಲಿ ಸಹ ರಾತ್ರಿ 9 ಗಂಟೆ ಬಳಿಕ ದ್ವಿಚಕ್ರ ವಾಹನಗಳ ಸಂಚಾರ ಬಂದ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎಲ್ಲಿ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧ

  • ಎಂ.ಜಿ ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್​ವರೆಗೆ ಪ್ರವೇಶ ನಿಷೇಧ..
  • ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್​ನಿಂದ ಅಪೇರಾ ಜಂಕ್ಷನನ್​ವರೆಗೆ ನಿಷೇಧ
  • ಚರ್ಚ್ ಸ್ಟ್ರೀಟ್​​ನಲ್ಲಿ ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್​ವರೆಗೆ ನಿಷೇಧ
  • ಮ್ಯೂಸಿಯಂ ರಸ್ತೆಯಲ್ಲಿ ಎಂಜಿ ರಸ್ತೆ ಜಂಕ್ಷನ್‌ನಿಂದ ಹಳೆ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ.) ವೃತ್ತದವರೆಗೆ) ಮತ್ತು ರೆಸ್ಟ್​ಹೌಸ್ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆ ಜಂಕ್ಷನ್​ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್​ವರೆಗೆ ನಿಷೇಧ
  • ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ ರಸ್ತೆ ಜಂಕ್ಷನ್​ವರೆಗೆ ಸೇರಿದಂತೆ ಈ ಮೇಲಿನ ರಸ್ತೆಗಳಲ್ಲಿ ಡಿ.31ರಂದು ರಾತ್ರಿ 10 ಗಂಟೆಯಿಂದ ಹೊಸ ವರ್ಷಾಚರಣೆ ಮುಗಿಯುವವರೆಗೆ ಅಗತ್ಯ ಸೇವೆ ಹೊರತುಪಡಿಸಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಎಲ್ಲಿ ಪಾರ್ಕಿಂಗ್ ನಿಷೇಧ..

  • ಎಂ.ಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ ನಿಷೇಧ
  • ಬ್ರಿಗೇಡ್ ರಸ್ತೆಯಲ್ಲಿ ಆರ್ಟ್ಸ್ & ಕ್ರಾಫ್ಟ್ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್​ವರೆಗೆ ನಿಷೇಧ
  • ಚರ್ಚ್ ಸ್ಟ್ರೀಟ್​ರಲ್ಲಿ ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್​ವರೆಗೆ ನಿಷೇಧ
  • ರೆಸ್ಟ್ ಹೌಸ್ ರಸ್ತೆಯಲ್ಲಿ ಬ್ರಿಗೇಡ್ ರಸ್ತೆ ಜಂಕ್ಷನ್​ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ ನಿಷೇಧ
  • ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ.ರಸ್ತೆ ಜಂಕ್ಷನ್‌ನಿಂದ ಹಳೇ ಮದ್ರಾಸ್‌ ಬ್ಯಾಂಕ್ ರಸ್ತೆ (ಎಸ್.ಬಿ.ಐ.) ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಅಂತವರಿಗೆ ದಂಡ ವಿಧಿಸಲಾಗುತ್ತದೆ‌.

ಇನ್ನೂ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀರ್ಟ್, ರೆಸಿಡೆನ್ಸಿ ರಸ್ತೆ ಹಾಗೂ ಸೆಂಟ್ ಮಾರ್ಕ್ಸ್ ರಸ್ತೆಗಳಲ್ಲಿ ನಿಲ್ಲಿಸಿದಂತಹ ವಾಹನಗಳ ಚಾಲಕರು ಹಾಗೂ ಮಾಲೀಕರು ತಮ್ಮ ವಾಹನಗಳನ್ನು ಹೊಸ ವರ್ಷದ ಆಚರಣೆ ಒಳಗಾಗಿ ತೆರವುಗೊಳಿಸಬೇಕು.

  • ಎಂ.ಜಿ.ರಸ್ತೆ, ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗೂ ಇನ್ನೂ ಮುಂದಕ್ಕೆ ಹೋಗುವಂತಹ ವಾಹನ ಚಾಲಕರು ಅನಿಲ್‌ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು, ಸೆಂಟ್ರಲ್ ಸ್ಟ್ರೀಟ್ - ಬಿ.ಆರ್.ವಿ. ಜಂಕ್ಷನ್​ನಲ್ಲಿ ಬಲ ತಿರುವು ಪಡೆದು ಕಬ್ಬನ್‌ರಸ್ತೆ ಮೂಲಕ ಸಂಚರಿಸಿ ವೆಬ್ ಜಂಕ್ಷನ್ ಬಳಿ ಎಂ.ಜಿ.ರಸ್ತೆಯನ್ನು ಸೇರಿ ಮುಂದೆ ಸಾಗಬಹುದಾಗಿದೆ.
  • ಹಲಸೂರು ಕಡೆಯಿಂದ ಕಂಟೊನ್ಮೆಂಟ್ ಕಡೆಗಳಿಗೆ ಹೋಗುವಂತಹ ವಾಹನಗಳು, ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ - ಡಿಕನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್‌ ರಸ್ತೆ ಸೇರಿ ಮುಂದೆ ಸಾಗಬಹುದಾಗಿದೆ.
  • ಕಾಮರಾಜ ರಸ್ತೆಯಲ್ಲಿ ಕಬ್ಬನ್‌ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್​ವರೆಗೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
  • ಸಾರ್ವಜನಿಕರು ತಮ್ಮ ವಾಹನಗಳನ್ನು ಶಿವಾಜಿನಗರ ಎಂ.ಟಿ.ಸಿ. ಶಾಪಿಂಗ್ ಕಾಂಪ್ಲೆಕ್ಸ್‌ 1ನೇ ಮಹಡಿಯ ವಾಹನ ನಿಲುಗಡೆ ಸ್ಥಳದಲ್ಲಿ ಸಹ ನಿಲುಗಡೆ ಮಾಡಬಹುದಾಗಿದೆ.
  • ಪ್ರಮುಖವಾಗಿ ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ, ಎಂ.ಜಿ.ರಸ್ತೆ ಜಂಕ್ಷನ್​ನಿಂದ ಅಪೇರಾ ಜಂಕ್ಷನ್ ಕಡೆಗೆ ಕಾಲ್ನಡಿಗೆಯಲ್ಲಿ ಮಾತ್ರ ಹೋಗುಬಹುದು. ವಿರುದ್ಧ ದಿಕ್ಕಿನಲ್ಲಿ ಹೋಗುವುದನ್ನು ನಿಷೇಧಿಸಲಾಗಿದೆ. ವಾಪಾಸ್​ ಹಿಂದಿರುಗುವಾಗ ರೆಸಿಡೆನ್ಸಿ ರಸ್ತೆ ಮುನ್ನ ಎಂ.ಜಿ.ರಸ್ತೆಗೆ ರೆಸಿಡೆನ್ಸಿ ರಸ್ತೆ ಕ್ರಾಸ್ (ಶಂಕರ್ ನಾಗ್ ಚಿತ್ರಮಂದಿರ) ಮಾರ್ಗವಾಗಿ ಬರಬಹುದಾಗಿದೆ.
  • ಸಾರ್ವಜನಿಕರು ಈ ಎಲ್ಲಾ ನಿಯಮಗಳನ್ನು ಪಾಲಿಸಿ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ಪೊಲೀಸರು ಮನವಿ‌ ಮಾಡಿದ್ದಾರೆ.

ABOUT THE AUTHOR

...view details