ಬೆಂಗಳೂರು: ಮದ್ಯದ ಅಮಲಿನಲ್ಲಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಟ್ರಾಫಿಕ್ ಎಎಸ್ಐಗೆ ಗುದ್ದಿದ ಘಟನೆ ಪೀಣ್ಯಾ ಫ್ಲೈ ಓವರ್ ಬಳಿ ತಡರಾತ್ರಿ ನಡೆದಿದೆ. ಕಾಮಗಾರಿ ಕಾರ್ಯ ಪ್ರಗತಿಯಲ್ಲಿರುವುದರಿಂದ ಫ್ಲೈ ಓವರ್ ಮೇಲೆ ಸಂಚಾರ ಸ್ಥಗಿತಗೊಳಿಸಿರುವುದನ್ನ ತಿಳಿಯದೇ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ, ಕರ್ತವ್ಯದಲ್ಲಿದ್ದ ಎಎಸ್‌ಐ ರಾಜಶೇಖರಯ್ಯಗೆ ಗುದ್ದಿದ್ದಾನೆ. ಪರಿಣಾಮ ಎಎಸ್‌ಐ ಕೈಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಗಸ್ತಿನಲ್ಲಿದ್ದ ಬಾಣಸವಾಡಿ ಪೊಲೀಸ್ ಠಾಣಾ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದವರನ್ನ ಬಾಣಸವಾಡಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳಾದ ಬಸವರಾಜು, ಮುಜಾಫರ್ ಎಂದು ಗುರುತಿಸಲಾಗಿದೆ.