ಬೆಂಗಳೂರು:ಟ್ರ್ಯಾಕ್ಟರ್ ಚಾಲಕ ಶಿವನಾಯ್ಕ ಕೊಲೆ ಪ್ರಕರಣ ಸಂಬಂಧ ಆರೋಪಿ ಸೈಯದ್ ಸೈಫ್ ಅಲಿಯಾಸ್ ಮ್ಯಾಟ್ರು ಎಂಬಾತನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ಕೊಡಲು ನಿರಾಕರಿಸಿದ್ದ ಟ್ರ್ಯಾಕ್ಟರ್ ಚಾಲಕನ ಕೊಲೆ:ಆರೋಪಿ ಬಂಧನ - undefined
ಮೊಬೈಲ್ ಕೊಡಲು ನಿರಾಕರಿಸಿದ್ದಕ್ಕೆ ಹತ್ಯೆ ಮಾಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಅಂದರ್
ಕಳೆದ ಭಾನುವಾರ ಮೊಬೈಲ್ ಕಳವು ಮಾಡಲು ಬಂದಿದ್ದ ಸೈಯದ್ ಸೈಫ್ ಅಲಿಯಾಸ್ ಮ್ಯಾಟ್ರು ಎಂಬಾತ, ಟ್ರ್ಯಾಕ್ಟರ್ ಚಾಲಕ ಶಿವನಾಯಕ್ಗೆ ಮೊಬೈಲ್ ಕೊಡುವಂತೆ ಕೇಳಿದ್ದಾನೆ. ಮೊಬೈಲ್ ಕೊಡಲು ನಿರಾಕರಿಸಿದಾಗ ಚಾಲಕನ ಎದೆ ಹಾಗೂ ಪಕ್ಕೆಲುಬಿನ ಜಾಗಕ್ಕೆ ಡ್ರ್ಯಾಗರ್‌ನಿಂದ ಇರಿದು ಎಸ್ಕೇಪ್ ಆಗಿದ್ದ. ಗಂಭೀರವಾಗಿ ಗಾಯಗೊಂಡ ಶಿವನಾಯ್ಕ ಮೃತಪಟ್ಟಿದ್ದರು. ಮೂರ್ನಾಲ್ಕು ಜನ ದುಷ್ಕರ್ಮಿಗಳು ಸೇರಿ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.