ಕರ್ನಾಟಕ

karnataka

ETV Bharat / state

ಪಟ್ಟಣ ಪಂ. ಹಾಗೂ ಪುರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಪರಿಷ್ಕೃತ ಮೀಸಲಾತಿ ಪ್ರಕಟ - ಪುರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಪರಿಷ್ಕೃತ ಮೀಸಲಾತಿ

100 ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಹಾಗೂ ಪಟ್ಟಣ ಪುರಸಭೆಯ 117 ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಪರಿಷ್ಕೃತ ಮೀಸಲಾತಿಯನ್ನು ಪ್ರಕಟಿಸಲಾಗಿದೆ‌.

town-panchayat-and-municipalities-revised-reservation-announced
ಪರಿಷ್ಕೃತ ಮೀಸಲಾತಿ ಪ್ರಕಟ

By

Published : Oct 9, 2020, 3:48 AM IST

ಬೆಂಗಳೂರು : ಪಟ್ಟಣ‌ ಪುರಸಭೆ ಹಾಗೂ ಪಟ್ಟಣ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪ್ರಕಟಿಸಿ ಸರ್ಕಾರ ಆದೇಶ ಹೊರಡಿಸಿದೆ.

100 ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಹಾಗೂ ಪಟ್ಟಣ ಪುರಸಭೆಯ 117 ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಪರಿಷ್ಕೃತ ಮೀಸಲಾತಿಯನ್ನು ಪ್ರಕಟಿಸಲಾಗಿದೆ‌.

  • ಪಟ್ಟಣ ಪಂಚಾಯತಿ ಮೀಸಲಾತಿ:
  • 25 ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ 24 ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಎಸ್​ಟಿ ವರ್ಗಕ್ಕೆ 4 ಅಧ್ಯಕ್ಷ ಸ್ಥಾನ, 1 ಉಪಾಧ್ಯಕ್ಷ ಸ್ಥಾನ ಮೀಸಲಿರಿಸಲಾಗಿದೆ.
  • 11 ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ 11 ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಗೆ ಮೀಸಲಿಡಲಾಗಿದೆ. 24 ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ ಹಾಗೂ 19 ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಿಡಲಾಗಿದೆ.
  • ತಲಾ 7 ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಎಸ್ ಸಿ ಮಹಿಳೆಗೆ ಮೀಸಲಿಡಲಾಗಿದೆ. 6 ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನ ಹಾಗೂ 7 ಉಪಾಧ್ಯಕ್ಷ ಸ್ಥಾನ ಎಸ್​​ಸಿಗೆ ಮೀಸಲಿಡಲಾಗಿದೆ. ತಲಾ 1 ಎಸ್​ಟಿ ಮಹಿಳೆಯರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಮೀಸಲಿರಿಸಲಾಗಿದೆ‌.
  • 11 ಪಟ್ಟಣ ಪಂಚಾಯತಿಗಳ ಅಧ್ಯಕ್ಷ ಹಾಗೂ 9 ಉಪಾಧ್ಯಕ್ಷ ಸ್ಥಾನವನ್ನು ಬಿಸಿಎ ಮಹಿಳೆಯರಿಗೆ ಮೀಸಲಿಡಲಾಗಿದೆ. ಬಿಸಿಬಿ ಮಹಿಳೆಯರಿಗೆ ತಲಾ‌ 2 ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಮೀಸಲಿಡಲಾಗಿದೆ.
  • ಪಟ್ಟಣ ಪುರಸಭೆ ಮೀಸಲಾತಿ:
  • 29 ಪಟ್ಟಣ ಪುರಸಭೆ ಅಧ್ಯಕ್ಷ ಹಾಗೂ 30 ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಎಸ್​ಟಿ ವರ್ಗಕ್ಕೆ 4 ಅಧ್ಯಕ್ಷ ಸ್ಥಾನ, 3 ಉಪಾಧ್ಯಕ್ಷ ಸ್ಥಾನ ಮೀಸಲಿರಿಸಲಾಗಿದೆ.
  • 11 ಪಟ್ಟಣ ಪುರಸಭೆ ಅಧ್ಯಕ್ಷ ಹಾಗೂ 10 ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಗೆ ಮೀಸಲಿಡಲಾಗಿದೆ. 29 ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ ಹಾಗೂ 28 ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಿಡಲಾಗಿದೆ.
  • 10 ಅಧ್ಯಕ್ಷ ಸ್ಥಾನ ಹಾಗೂ 9 ಉಪಾಧ್ಯಕ್ಷ ಸ್ಥಾನವನ್ನು ಎಸ್​​ಸಿ ಮಹಿಳೆಗೆ ಮೀಸಲಿಡಲಾಗಿದೆ. 9 ಪಟ್ಟಣ ಪುರಸಭೆ ಅಧ್ಯಕ್ಷ ಸ್ಥಾನ ಹಾಗೂ 6 ಉಪಾಧ್ಯಕ್ಷ ಸ್ಥಾನ ಎಸ್​ಸಿಗೆ ಮೀಸಲಿಡಲಾಗಿದೆ. 4 ಎಸ್​ಟಿ ಮಹಿಳೆಯರಿಗೆ ಅಧ್ಯಕ್ಷ ಹಾಗೂ 3 ಉಪಾಧ್ಯಕ್ಷ ಸ್ಥಾನವನ್ನು ಮೀಸಲಿರಿಸಲಾಗಿದೆ‌.
  • ತಲಾ 12 ಪಟ್ಟಣ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಸಿಎ ಮಹಿಳೆಯರಿಗೆ ಮೀಸಲಿಡಲಾಗಿದೆ. ಬಿಸಿಬಿ ಮಹಿಳೆಯರಿಗೆ ತಲಾ 3 ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಮೀಸಲಿಡಲಾಗಿದೆ.

For All Latest Updates

ABOUT THE AUTHOR

...view details