ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಎಂಟು ಹೊಸ ಕೊರೊನಾ ಪ್ರಕರಣ: ದಾವಣಗೆರೆಯಲ್ಲಿ ಕೋವಿಡ್​​​​ಗೆ ಮತ್ತೊಂದು ಬಲಿ

ರಾಜ್ಯದಲ್ಲಿ ಇಂದು ಹೊಸದಾಗಿ 8 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು,ದಾವಣಗೆರೆಯಲ್ಲಿ ಓರ್ವ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ.

total corona cases from karnataka
ರಾಜ್ಯದಲ್ಲಿ ಎಂಟು ಹೊಸ ಕೊರೊನಾ ಪ್ರಕರಣ

By

Published : May 7, 2020, 1:49 PM IST

ಬೆಂಗಳೂರು:ರಾಜ್ಯದಲ್ಲಿ ಹೊಸ ಎಂಟು ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 701 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಎಂಟು ಹೊಸ ಕೊರೊನಾ ಪ್ರಕರಣ

ದಾವಣಗೆರೆಯಲ್ಲಿ ಕೊರೊನಾ ಸೋಂಕಿನಿಂದ ಮಹಿಳೆ ಮೃತಪಟ್ಟಿದ್ದಾರೆ. P 694 - 55 ವರ್ಷದ ಮಹಿಳೆ, ತೀವ್ರ ಉಸಿರಾಟದ ಸಮಸ್ಯೆಯಿಂದ (SARI) ಆಸ್ಪತ್ರೆಗೆ ದಾಖಲಾಗಿದ್ದರು. ಡಯಾಬಿಟಿಸ್, ಹೈಪರ್ ಟೆನ್ಶನ್ ಕೂಡಾ ಇದ್ದುದ್ದರಿಂದ ಇಂದು ಬೆಳಗ್ಗೆ ದಾವಣಗೆರೆಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇನ್ನು ಇಂದು ಹೊಸದಾಗಿ ಬೆಂಗಳೂರು 1, ಬೆಳಗಾವಿ 1, ಕಲ್ಬುರ್ಗಿ 3, ದಾವಣಗೆರೆಯಲ್ಲಿ 3 ವ್ಯಕ್ತಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಬೆಳಗಾವಿಯಲ್ಲಿ 13 ವರ್ಷದ ಬಾಲಕಿಗೆ ಸೋಂಕು ತಗುಲಿದ್ದು, ರೋಗಿ ನಂ. 700 ಆಗಿದ್ದು, ಪಿ- 634 ರ ಸಂಪರ್ಕದಿಂದ ಬಾಲಕಿಗೆ ಸೋಂಕು ಹರಡಿದೆ.

ABOUT THE AUTHOR

...view details