ಬೆಂಗಳೂರು:ನಾಳೆ ಡಿ.ಕೆ ಶಿವಕುಮಾರ್ ಹಿತೈಷಿಗಳು ಪ್ರತಿಭಟನೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಇದು ಶಾಂತಿಯುತವಾಗಿ ನಡೆಯಲಿ, ಅವರ ಭಾವನೆ ವ್ಯಕ್ತಪಡಿಸಿಕೊಳ್ಳಲಿ ನಾವು ಕಾನೂನು ಪಾಲನೆ ಮಾಡುವುದಾಗಬೇಕು ಸಂವಿಧಾನದ ಚೌಕಟ್ಟಿನಲ್ಲಿ ಬದುಕಬೇಕು ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ್ ಹೇಳಿದರು.
ನಗರದಲ್ಲಿ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠಂ ಹರಿಹರ ಪುರ ಗುರುಗಳ ಚಾತುರ್ಮಾಸ ವೃತ ಗುರುವಂದನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಗಳಿಂದ ಆಶೀರ್ವಾದ ಪಡೆದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕಾನೂನು ಕೈಗೆ ತೆಗೆದುಕೊಳ್ಳುವುದು ಆಗಬಾರದು. ಭಾವನಾತ್ಮಕವಾಗಿ ವಿರೋಧಿಸುವ ಕೆಲಸ ಆಗಬಾರದು, ಕಾನೂನಿನ ಮೇಲೆ ವಿಶ್ವಾಸ ಇದೆ ಅಂತಾ ಸ್ವತಃ ಶಿವಕುಮಾರ್ ಹೇಳಿದ್ದಾರೆ. ಭ್ರಷ್ಟಾಚಾರ ರಹಿತ ಸಮಾಜ ಕಟ್ಟಬೇಕು, ಕಾನೂನು ಎತ್ತಿ ಹಿಡಿಯುವ ಕೆಲಸ ಎಲ್ಲರಿಂದಲೂ ಅಗಬೇಕು ಎಂದರು.
ಡಿಸಿಎಂ ಡಾ.ಅಶ್ವತ್ಥನಾರಾಯಣ್ ಪ್ರತಿಕ್ರಿಯೆ ನಮ್ಮ ಹೋರಾಟ ಭ್ರಷ್ಟಾಚಾರ, ಬೇನಾಮಿ ಆಸ್ತಿ ವಿರುದ್ಧ ಆಗಿರಬೇಕು. ಸಮಾಜಕ್ಕೆ ಪೂರಕ ಕೆಲಸ ಮಾಡುವುದು ಹೇಗೆ ಎಂಬ ಬಗ್ಗೆ ನಾನು ಯೋಚನೆ ಮಾಡುತ್ತೇನೆ. ಸಿದ್ದರಾಮಯ್ಯ ಅನುಭವಿ ನಾವು ಯಾವುದೇ ಕಾರ್ಯಕ್ರಮ ನಿಲ್ಲಿಸಿಲ್ಲ. ಏನಾದರೂ ಅವ್ಯವಹಾರ ಆಗಿದ್ದರೆ ಸರಿಪಡಿಸಬೇಕು ಎಂಬುದು ನಮ್ಮ ಉದ್ದೇಶ. ಅವ್ಯವಹಾರ, ತಪ್ಪಾಗಿದ್ದರೆ ಸರಿಪಡಿಸೋದು ಸಿಎಂ ಮತ್ತು ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.
ಇನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈಗ ಹತಾಶರಾಗಿದ್ದಾರೆ. ಅವರು ಎಷ್ಟು ಭ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಟಿದ್ದಾರೆ? ಜಾತಿ ಇರೋದು ಸಮಾಜಕ್ಕಾಗಿ ಎಂದು ವಿರುದ್ಧ ಡಿಸಿಎಂ ಅಶ್ವತ್ಥನಾರಾಯಣ್ ಹರಿಹಾಯ್ದರು.
ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಏನಿಲ್ಲ, ನಮಗೆ ಜನ ಬಹುಮತ ಕೊಟ್ಟಿದ್ದಾರೆ. ಗೋ ಹತ್ಯೆ ನಿಷೇಧ ವಿಚಾರ ಕಾಯ್ದೆ ಇನ್ನಷ್ಟು ಬಲಪಡಿಸಬೇಕಿದ್ರೆ ಅದಕ್ಕೂ ನಾವು ಸಿದ್ಧ ಇದ್ದೇವೆ, ಆ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ ಎಂದರು.