ಬೆಂಗಳೂರು: ಜನರಿಗೆ ಕರ್ಪ್ಯೂ ನಿಯಮ ಹೇರಿ ತೊಂದರೆ ಕೊಡುವುದಿರಂದ ಸರ್ಕಾರಕ್ಕೆ ಯಾವುದೇ ಲಾಭವಿಲ್ಲ. ಜನರ ಆರೋಗ್ಯದ ದೃಷ್ಟಿಯಿಂದಾಗಿಯೇ ಸರ್ಕಾರ ಕಠಿಣ ನಿಯಮಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಲಾಗಿದೆ.
ವೀಕೆಂಡ್ ಕರ್ಪ್ಯೂ ವಿನಾಯಿತಿ ಕುರಿತು ನಾಳೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾನಾಡಿದ ಅವರು, ವಾರಾಂತ್ಯದ ಕರ್ಪ್ಯೂ ಸೇರಿದಂತೆ ಸರ್ಕಾರದ ಕಠಿಣ ನಿರ್ಬಂಧಗಳಿಗೆ ಜನಾಕ್ರೋಶ ವ್ಯಕ್ತವಾಗುತ್ತಿರುವ ಕುರಿತು ನಾಳೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತದೆ. ಅಲ್ಲಿ ಏನು ನಿರ್ಧಾರವಾಗಲಿದೆ ಎಂದು ಕಾದು ನೋಡೋಣ. ಆ ಸಭೆಯನ್ನು ಹೈ-ವೊಲ್ಟೇಜ್ ಮೀಟಿಂಗ್ ಅಂತೆಲ್ಲಾ ಕರೆಯೋದು ಬೇಡ ಎಂದರು.
ಓದಿ:ಶೇ.30ರಷ್ಟು ಮಂದಿ ಲಸಿಕೆ ಪಡೆದ 6 ತಿಂಗಳ ಬಳಿಕ ವ್ಯಾಕ್ಸಿನ್ ಪ್ರತಿರಕ್ಷೆ ಕಳೆದುಕೊಳ್ಳುತ್ತಾರೆ: ಅಧ್ಯಯನ
ಕೋವಿಡ್ ನಿಯಂತ್ರಣ ನಮ್ಮ ಆದ್ಯತೆ
ಜನರ ಆರೋಗ್ಯದ ಹಿತದೃಷ್ಟಿಯಿಂದ ಕೆಲ ಅವಶ್ಯಕ ಕ್ರಮ ಕೈಗೊಂಡಿದ್ದೇವೆ. ಕೋವಿಡ್ ನಿಯಂತ್ರಣಕ್ಕಷ್ಟೇ ಆದ್ಯತೆ ನೀಡಿದ್ದೇವೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಿಎಂ ಕ್ರಮ ತೆಗೆದುಕೊಂಡಿದ್ದಾರೆ.
ಜನರನ್ನು ಸಂಕಷ್ಟಕ್ಕೆ ದೂಡುವುದು, ಅವರ ಭಾವನೆಗಳಿಗೆ ವಿರೋಧ ಮಾಡುವುದು ಸರ್ಕಾರದ ಉದ್ದೇಶವಲ್ಲ. ಅನಿವಾರ್ಯವಾಗಿ ಕೆಲ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ತೊಂದರೆ ಕೊಡುವುದರಿಂದ ಸರ್ಕಾರಕ್ಕೆ ಆದಾಯ, ಲಾಭ ಇಲ್ಲ ಎಂದು ಸರ್ಕಾರದ ಕಠಿಣ ನಿಯಮಗಳನ್ನು ಸಮರ್ಥಿಸಿಕೊಂಡರು.
ನಾಳೆ ಎಲ್ಲವೂ ಚರ್ಚೆಗೆ ಬರಲಿದೆ
ನಾಳಿನ ಸಭೆಯಲ್ಲಿ ನಡೆಯುವ ಚರ್ಚೆಯಲ್ಲಿ ಎಲ್ಲವೂ ಸಮಾಲೋಚನೆಗೆ ಬರಲಿದೆ. ನಮ್ಮ ಕ್ರಮಗಳಿಂದ ಲಾಭ ಆಗಿದೆಯಾ?.. ಯಾವ ರೀತಿ ಆಗಿದೆ. ಒಂದು ವೇಳೆ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಏನಾಗುತ್ತಿತ್ತು. ಈಗ ನಿಯಮ ಸಡಿಲಿಕೆ ಮಾಡಿದರೆ ಏನಾಗಲಿದೆ ಎನ್ನುವುದು ಸೇರಿ ಎಲ್ಲವೂ ಚರ್ಚೆಯಾಗಲಿದೆ. ಅಂತಿಮವಾಗಿ ಮುಂದೆ ಯಾವ ರೀತಿಯ ನಿಯಮಗಳು ಇರಬೇಕು ಎಂದು ಮುಖ್ಯಮಂತ್ರಿಗಳು ನಿರ್ಧರಿಸಲಿದ್ದಾರೆ ಎಂದರು.
ಓದಿ:ಜಲ್ಲಿಕಟ್ಟು ಸ್ಪರ್ಧೆ ವೇಳೆ ಗೂಳಿಗಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಬಂಧನ! VIDEO
ಈಗಾಗಲೇ ತಜ್ಞರು ವರದಿ ನೀಡಿದ್ದಾರೆ. ವರ್ಸ್ಟ್ ಸಿನಾರಿಯಾದಲ್ಲಿ ನಿತ್ಯ 1 ರಿಂದ 1.20 ಲಕ್ಷ ಕೇಸ್ಗಳು ರಾಜ್ಯದಲ್ಲಿ ಬರಲಿದೆ. 60-70 ಸಾವಿರ ಕೇಸ್ಗಳು ಬೆಸ್ಟ್ ರೇಸ್ ಸಿನಾರಿಯಾದಲ್ಲಿ ಬರಲಿದೆ ಎನ್ನುವ ವರದಿ ನೀಡಿದ್ದಾರೆ.
ಸದ್ಯ ಅವರು ನಿರೀಕ್ಷೆ ಮಾಡಿದ ರೀತಿಯೇ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಮಾರ್ಗಸೂಚಿ ಪಾಲಿಸಿ ಮುಂಜಾಗ್ರತಾ ಕ್ರಮ ವಹಿಸಿ ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಹೋಂ ಐಸೊಲೇಟ್ ಆದವರಿಗೆ ಮೆಡಿಕಲ್ ಕಿಟ್ ತಕ್ಷಣ ಕೊಡಲು ಪ್ರಾರಂಭಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿಯೂ ಕೊಡಲಾಗುತ್ತಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ವಿಳಂಬವಾಗಿದ್ದು, ಅಲ್ಲಿಯೂ ಕೂಡಲೇ ಮೆಡಿಕಲ್ ಕಿಟ್ ನೀಡುವ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದರು.