ಕರ್ನಾಟಕ

karnataka

ನಾಳೆ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನ.. ‌ಇದರ ಮೇಲೂ ಕೊರೊನಾ ಕರಿಛಾಯೆ!!

ಇಡೀ ವಿಶ್ವವೇ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಸ್ವಯಂಪ್ರೇರಿತ ರಕ್ತದಾನದ ಮೇಲೆ ಸಹ ತನ್ನ ಕರಾಳ ಛಾಯೆ ಮೂಡಿಸಿದೆ. ರಕ್ತದಾನ ಶಿಬಿರಗಳು ಬಹುತೇಕ ಸ್ಥಗಿತಗೊಂಡಿವೆ.

By

Published : Sep 30, 2020, 5:04 PM IST

Published : Sep 30, 2020, 5:04 PM IST

redcross
ರೆಡ್ ಕ್ರಾಸ್

ಬೆಂಗಳೂರು:ರಾಜ್ಯದಲ್ಲಿ ಜನತೆಯ ರಕ್ತದ ಅವಶ್ಯಕತೆಗಳನ್ನು ಯಶಸ್ವಿಯಾಗಿ ಕಳೆದ 25 ವರ್ಷಗಳಿಂದ ಪೂರೈಸುತ್ತ ಬಂದಿರುವ ಕರ್ನಾಟಕ ರೆಡ್ ಕ್ರಾಸ್ ರಕ್ತನಿಧಿಯು ಸ್ವಯಂಪ್ರೇರಿತ ರಕ್ತದಾನದ ಬಗ್ಗೆ ಅರಿವು ಮೂಡಿಸುವುದರಲ್ಲಿ ಸದಾ ಮುಂಚೂಣಿಯಲ್ಲಿದೆ.

ವಾರ್ಷಿಕವಾಗಿ ಸುಮಾರು 500ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸುಮಾರು 35,000 ರಕ್ತದ ಯೂನಿಟ್​ಗಳನ್ನು ಸಂಗ್ರಹಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ರಕ್ತದ ಅಗತ್ಯತೆ ಹಾಗೂ ಮಹತ್ವದ ಬಗ್ಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 1 ರಂದು ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನವನ್ನ ಆಚರಿಸಲಾಗುತ್ತಿದೆ.

ಇಡೀ ವಿಶ್ವವೇ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಸ್ವಯಂಪ್ರೇರಿತ ರಕ್ತದಾನದ ಮೇಲೆ ಸಹ ತನ್ನ ಕರಾಳ ಛಾಯೆ ಮೂಡಿಸಿದೆ. ರಕ್ತದಾನ ಶಿಬಿರಗಳು ಬಹುತೇಕ ಸ್ಥಗಿತಗೊಂಡಿದ್ದು, ಸ್ವಯಂಪ್ರೇರಿತ ರಕ್ತದಾನಿಗಳು ಇಂತಹ ತುರ್ತು ಸಂದರ್ಭದಲ್ಲಿ ಯಾವುದೇ ಆತಂಕಕ್ಕೆ ಒಳಗಾಗದೇ ರಕ್ತದಾನ ಮಾಡುವಂತೆ ಪ್ರೇರೇಪಿಸುವುದು ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಉದ್ದೇಶವಾಗಿದೆ.

ಈ ವರ್ಷದ ಘೋಷಣೆ "ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡೋಣ, ಕೊರೊನಾ ವಿರುದ್ಧ ಹೋರಾಟಕ್ಕೆ ಕೊಡುಗೆ ನೀಡೋಣ" ಎಂಬುದಾಗಿದೆ. ದಾನಿಗಳಿಗೆ ರಕ್ತದ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವುದು, ರಕ್ತದಾನ ಮಾಡಲು ಪ್ರೇರೇಪಿಸುವುದು ಹಾಗೂ ವ್ಯವಸ್ಥಿತವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸುವುದರಲ್ಲಿ ರಕ್ತದಾನ ಶಿಬಿರಗಳ ಆಯೋಜಕರ ಪಾತ್ರ ಮಹತ್ವದ್ದಾಗಿದೆ. ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸಹಕರಿಸಿದ 10 ಸ್ವಯಂಪ್ರೇರಿತ ಸಂಸ್ಥೆಗಳನ್ನು ನಾಳೆ ಸನ್ಮಾನಿಸಲಾಗುತ್ತಿದೆ.

ABOUT THE AUTHOR

...view details