ಬೆಂಗಳೂರು: ರೈತರ ಬೇಡಿಕೆಗಳು ಈಡೇರದ ಕಾರಣ ನಾಳೆ ರೈತ ಸಂಘಟನೆಗಳು ಸೇರಿದಂತೆ ಒಟ್ಟು 49 ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ.
ಈಡೇರದ ಬೇಡಿಕೆ: ರೈತ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್ - ಎಪಿಎಂಸಿ ತಿದ್ದುಪಡಿ ಮಸೂದೆ
ರಾಜ್ಯ ಸರ್ಕಾರದಿಂದ ಭೂ ಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗೆ ಶಾಸನ ಸಭೆಯ ಅನುಮೋದನೆ ಪಡೆದಿರುವ ಕಾರಣ ಇದರ ವಿರುದ್ಧ ರೈತ ಸಂಘಟನೆಗಳು ಸೇರಿ ಒಟ್ಟು 49 ಸಂಘಟನೆಗಳು ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಿವೆ.
ರಾಜ್ಯ ಸರ್ಕಾರ ಭೂ ಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗೆ ಶಾಸನಸಭೆಯ ಅನುಮೊದನೆ ಪಡೆದಿವೆ. ಇದರ ವಿರುದ್ಧ ನಾಳೆ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕಳೆದ 5 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಕಿವಿಗೊಟ್ಟಿಲ್ಲ ಎನ್ನಲಾಗ್ತಿದೆ. ಹೀಗಾಗಿ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಕರೆ ನೀಡಿರುವ ಬಂದ್ಗೆ ಕಾಂಗ್ರೆಸ್ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ, ಆಲ್ ಇಂಡಿಯಾ ಯುನೈಟೆಡ್, ಟ್ರೇಡ್ ಯುನಿಯನ್ ಸೋಷಿಯಲ್ ಯೂನಿಟಿ ಸೆಂಟರ್, ಮಹಿಳಾ ಸಾಂಸ್ಕೃತಿಕ ಸಂಘಟನೆ ಸೇರಿದಂತೆ ಸುಮಾರು 40ಕ್ಕೂ ಹೆಚ್ವು ಸಂಘಟನೆಗಳು ಭಾಗಿಯಾಗಲಿವೆ.
ಸದ್ಯ ಕೊರೊನಾದಿಂದ ತತ್ತರಿಸಿದ ಜನರಿಗೆ ನಾಳೆ ಬಂದ್ ಬಿಸಿ ತಟ್ಟಲಿದೆ. ಆದರೆ ಸರ್ಕಾರ ಅಗತ್ಯ ಸೇವೆಗಳನ್ನ ಮೊಟಕುಗೊಳಿಸದೆ ಜನರ ಸೇವೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದೆ. ಖಾಸಗಿ ಓಲಾ, ಉಬರ್ ಹಾಗೂ ಖಾಸಗಿ ಬಸ್ಗಳು ಇರದೇ ಇದ್ದು, ಬಂದ್ಗೆ ಬೆಂಬಲ ನೀಡಿದ್ದಾರೆ.