ಬೆಂಗಳೂರು: ಈ ವರ್ಷದ ನಾಲ್ಕನೇ ಗ್ರಹಣ, ನಾಳೆ ಬೆಳಗ್ಗೆ ಸಂಭವಿಸಲಿದೆ. ಇದನ್ನು ವಿಜ್ಞಾನಿಗಳು ಅರೆಛಾಯಾ ಚಂದ್ರಗ್ರಹಣ ಅಥವಾ ಪೆನ್ಯುಂಬ್ರಲ್ ಚಂದ್ರಗ್ರಹಣ ಎನ್ನುತ್ತಾರೆ.
ನಾಳೆ ಸಂಭವಿಸಲಿದೆ ಅರೆಛಾಯಾ ಚಂದ್ರಗ್ರಹಣ: ಭಾರತಕ್ಕೆ ಗೋಚರ ಇಲ್ಲ - ನಾಲ್ಕನೇ ಗ್ರಹಣ,
ಈ ವರ್ಷದ ನಾಲ್ಕನೇ ಗ್ರಹಣ, ನಾಳೆ ಬೆಳಗ್ಗೆ ಸಂಭವಿಸಲಿದೆ. ಇದನ್ನು ವಿಜ್ಞಾನಿಗಳು ಅರೆಛಾಯಾ ಚಂದ್ರಗ್ರಹಣ ಅಥವಾ ಪೆನ್ಯುಂಬ್ರಲ್ ಚಂದ್ರಗ್ರಹಣ ಎನ್ನುತ್ತಾರೆ.
ಚಂದ್ರಗ್ರಹಣ
ನಾಳೆ ಬೆಳಗ್ಗೆ 8-37 ರಿಂದ 11-22ಕ್ಕೆ ಪೂರ್ಣಗೊಳ್ಳಲಿದೆ. ಒಟ್ಟು 2 ಗಂಟೆ 45 ನಿಮಿಷ ನಡೆಯುತ್ತದೆ. ಆದರೆ ಇದು ಅಮೇರಿಕಾದಲ್ಲಿ ಗೋಚರಿಸಲಿದೆ. ಭಾರತದಲ್ಲಿ ಹಗಲಿರುವುದರಿಂದ ಕಾಣೋದೆ ಇಲ್ಲ. ಹೀಗಾಗಿ ನೆಹರೂ ತಾರಾಲಯದಲ್ಲಿ ವೀಕ್ಷಣೆಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ನೆಹರೂ ತಾರಾಲಯದ ನಿರ್ದೇಶಕರಾದ ಪ್ರಮೋದ್ ಗಲಗಲಿ ತಿಳಿಸಿದರು.
ಚಂದ್ರನ ಮೇಲೆ ಭೂಮಿಯ ಅರೆಛಾಯೆ ಬೀಳಲಿದೆ. ಪೆನಂಬ್ರಾ ಎಂದು ಕರೆಯಲ್ಪಡುವ ಭೂಮಿಯ ಹೊರಗೆ ಹರಡಿರುವ ನೆರಳು ಚಂದ್ರನ ಮೇಲ್ಮೈಯಲ್ಲಿ ಬೀಳುತ್ತದೆ. ಜೂನ್ ತಿಂಗಳಲ್ಲೂ ನಡೆದ ಚಂದ್ರಗ್ರಹಣ ಭಾರತಕ್ಕೆ ಗೋಚರ ಇರಲಿಲ್ಲ.