ಕರ್ನಾಟಕ

karnataka

ETV Bharat / state

ಕೊಡಗು ಪುನರ್ವಸತಿ ಕುರಿತು ನಾಳೆ ಸಿಎಂ‌ ಸಭೆ! - ಸಿಎಂ‌ ಸಭೆ

ಕೊಡಗಿನಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪ ಸಂಬಂಧ ಕೈಗೊಂಡ ಪುನರ್ವಸತಿ ಕಾರ್ಯಗಳ ಪರಿಶೀಲನಾ ಸಭೆಯನ್ನು ನಾಳೆ ಸಿಎಂ ಬಿ.ಎಸ್.ಯಡಿಯೂರಪ್ಪ ಆಯೋಜಿಸಿದ್ದು, ಇನ್ಫೋಸಿಸ್​​ನ ಸುಧಾ ಮೂರ್ತಿ ಅವರಿಗೂ ಸಭೆಗೆ ಆಹ್ವಾನ ನೀಡಲಾಗಿದೆ.

ಕೊಡಗು ಪುನರ್ವಸತಿ ಕುರಿತು ನಾಳೆ ಸಿಎಂ‌ ಸಭೆ!

By

Published : Jul 29, 2019, 9:40 PM IST

ಬೆಂಗಳೂರು: ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂಬಂಧ ಕೈಗೊಂಡ ಪುನರ್ವಸತಿ ಕಾರ್ಯಗಳ ಪರಿಶೀಲನಾ ಸಭೆಯನ್ನು ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯೋಜಿಸಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಕೈಗೊಂಡ ಪುನರ್ವಸತಿ ಕಾರ್ಯಗಳ ಕುರಿತಂತೆ ಸಭೆ ನಡೆಸುತ್ತಿದ್ದು, ಕೊಡಗು ಜಿಲ್ಲೆಯ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೂ ಸಭೆಗೆ ಆಹ್ವಾನ ನೀಡಲಾಗಿದೆ.

ABOUT THE AUTHOR

...view details