ಬೆಂಗಳೂರು: ಆರ್.ಆರ್. ನಗರ ಉಪಚುನಾವಣೆಯ ಫಲಿತಾಂಶ ಮಂಗಳವಾರ ಹೊರಬೀಳಲಿದ್ದು, ಹೈ ವೋಲ್ಟೇಜ್ನಲ್ಲಿರುವ ಆರ್ ಆರ್ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ರೀತಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.
ಗುಪ್ತಚರ ಇಲಾಖೆ ಈಗಾಗಲೇ ಕಣ್ಗಾವಲು ಇಟ್ಟು ಫಲಿತಾಂಶ ಮೊದಲು ಹಾಗೂ ನಂತರ ಯಾವುದೇ ಘಟನೆಗಳು ನಡಿಯದಂತೆ ಎಚ್ಚರಿಕೆ ವಹಿಸಿ. ಚುನಾವಣೆ ನಡೆಯುವಾಗ ಅಹಿತಕರ ಘಟನೆ, ಗಲಾಟೆಗಳು ನಡೆಯುತ್ತವೆ ಎಂಬ ಕೆಲ ಊಹಾಪೋಹಗಳು ಎದ್ದಿದ್ದವು. ಈ ವೇಳೆ ಅತೀ ಹೆಚ್ವು ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಖಾಕಿ ಕಣ್ಗಾವಲು ಹಾಕಲಾಗಿತ್ತು. ನಾಳೆ ಯಾವುದೇ ಪಕ್ಷ ಅಭ್ಯರ್ಥಿ ಗೆಲವು ಸಾಧಿಸಿದರೆ ಸಂಭ್ರಮ ಒಂದೆಡೆಯಾದರೆ ಮತ್ತೊಂದೆಡೆ ಸೋತ ಅಭ್ಯರ್ಥಿಯ ಕೆಲ ಬೆಂಬಲಿಗರು, ಅಥವಾ ಕೆಲ ಕಿಡಿಗೇಡಿಗಳು ಅಹಿತಕರ ಘಟನೆಗಳನ್ನ ನಡೆಸುವ ಸಾಧ್ಯತೆ ಇರುತ್ತದೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪಶ್ಚಿಮ, ಪೂರ್ವ, ಸಿಸಿಬಿಯ ಹೆಚ್ಚುವರಿ ಆಯುಕ್ತರುಗಳಿಗೆ, ಡಿಸಿಪಿಗಳಿಗೆ ಹೆಚ್ಚಿನ ಭದ್ರತೆ ಹೊಣೆ ನೀಡಿದ್ದಾರೆ.