ಕರ್ನಾಟಕ

karnataka

ETV Bharat / state

ನಾಳೆ ಬೆಂಗಳೂರಿಗೂ ತಟ್ಟಲಿದೆ ಮುಷ್ಕರ​ ಬಿಸಿ: ಭದ್ರತಾ ವ್ಯವಸ್ಥೆ ಕುರಿತು ಡಿಸಿಪಿ ರಮೇಶ್​ ಮಾಹಿತಿ

ದೇಶಾದ್ಯಂತ ನಾಳೆ ಬಂದ್​ಗೆ ಕರೆ ನೀಡಲಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಮುಷ್ಕರದ ಬಿಸಿ ತಟ್ಟಲಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮುಂಜಾಗ್ರತಾ ಕ್ರಮವಾಗಿ ಫ್ರೀಡಂ ಪಾರ್ಕ್​ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಭದ್ರತೆ ಕುರಿತು ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಮಾತನಾಡಿದ್ದಾರೆ.

Tight Securuty in Bengaluru
ಸಿಲಿಕಾನ್​ ಸಿಟಿಗೂ ತಟ್ಟಲಿದೆ ಬಂದ್​ ಬಿಸಿ

By

Published : Jan 7, 2020, 5:42 PM IST

ಬೆಂಗಳೂರು: ದೇಶಾದ್ಯಂತ ನಾಳೆ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಬೆಂಗಳೂರಿನಲ್ಲೂ ಮುಷ್ಕರದ ಬಿಸಿ ತಟ್ಟಲಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಫ್ರೀಡಂ ಪಾರ್ಕ್​ನಲ್ಲಿ ಮಾತ್ರ ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಒಂದು ವೇಳೆ ಅಹಿತಕರ ಪರಿಸ್ಥಿತಿ ನಿರ್ಮಾಣವಾದ್ರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಖಡಕ್​ ಸೂಚನೆ ನೀಡಿದ್ದಾರೆ.

ಸಿಲಿಕಾನ್​ ಸಿಟಿಗೂ ತಟ್ಟಲಿದೆ ಬಂದ್​ ಬಿಸಿ

ಇನ್ನು, ಫ್ರೀಡಂಪಾರ್ಕ್ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ವ್ಯಾಪ್ತಿಯಲ್ಲಿದ್ದು, ಪಾರ್ಕ್​ನಲ್ಲಿ ಅನೇಕ ಕಾರ್ಮಿಕರು ಸೇರಿ ಮುಷ್ಕರ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಡಿಸಿಪಿ ರಮೇಶ್ ನೇತೃತ್ವದಲ್ಲಿ ಎಸಿಪಿ, ಇನ್ಸ್​ಪೆಕ್ಟರ್, ಪಿಎಸ್ಐ , ಎಎಸ್ಐ, ಕೆಎಸ್ಆರ್​ಪಿ ತುಕಡಿ ಸೇರಿದಂತೆ ಸುಮಾರು 500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಕೇಂದ್ರ ವಿಭಾಗದಲ್ಲಿ ಡಿಸಿಪಿ ಚೇತನ್ ಸಿಂಗ್ ನೇತೃತ್ವದಲ್ಲಿ ಭದ್ರತೆ ವಹಿಸಲಾಗುವುದು. ವಿಧಾನಸೌಧ, ರಾಜಭವನ, ಮೆಜೆಸ್ಟಿಕ್, ಮೆಟ್ರೋ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ಡಿಪೋಗಳಿಗೂ ಹೆಚ್ವಿನ ಭದ್ರತೆ ವಹಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details