ಬೆಂಗಳೂರು: ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆರೋಪದ ಮೇಲೆ ಗೋವಿಂದಪುರ ಪೊಲೀಸರಿಂದ ನೋಟಿಸ್ ಪಡೆದಿದ್ದ ತೆಲುಗು ನಟ ತನೀಶ್ ಇಂದು ವಿಚಾರಣೆಗೆ ಹಾಜರಾಗಿದ್ದರು.
ಓದಿ: ಡ್ರಗ್ಸ್ ಪ್ರಕರಣ: ತೆಲುಗು ನಟ ತನೀಶ್ ಸೇರಿ ಐವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್

ಡ್ರಗ್ಸ್ ಪ್ರಕರಣದಲ್ಲಿ ಭಾಗಿ ಆರೋಪದಡಿ ಸಿನಿಮಾ ನಿರ್ಮಾಪಕ ಶಂಕರಗೌಡ ಕಚೇರಿ ಮೇಲೆ ಗೋವಿಂದಪುರ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದ್ದರು. ಶಂಕರೇಗೌಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸಿಕ್ಕಿದ ಸುಳಿವಿನ ಆಧಾರದ ಮೇಲೆ ಟಾಲಿವುಡ್ ನಟ ತನೀಶ್ ಸೇರಿ ಐವರಿಗೆ ಮಾ. 12ರಂದು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ಇಂದು ವಿಚಾರಣೆಗೆ ಹಾಜರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಶಂಕರೇಗೌಡ ಕೊಟ್ಟ ಹೇಳಿಕೆ ಆಧರಿಸಿ ಹೆಚ್ಚಿನ ವಿಚಾರಣೆಯನ್ನು ಗೋವಿಂದಪುರ ಇನ್ಸ್ಪೆಕ್ಟರ್ ನಡೆಸಿದ್ದಾರೆ.