ಬೆಂಗಳೂರು:ರಾಜ್ಯದಲ್ಲಿ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು ತುಂಬುತ್ತಿದ್ದು, ನೀರಿನ ಒಳಹರಿವು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ? ಯಾವ ಹಂತದಲ್ಲಿ ಏರಿಕೆಯಾಗಿದೆ? ಹಾಗೂ ರಾಜ್ಯದಲ್ಲಿ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ನೀರಿನ ಮಟ್ಟ
ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ: 145.58 ಮಿ.ಮೀ.,
ಕಳೆದ ವರ್ಷ ಇದೇ ದಿನ: 13.67 ಮಿ.ಮೀ. ಮಳೆಯಾಗಿತ್ತು
ಜನವರಿಯಿಂದ ಇಲ್ಲಿಯವರೆಗಿನ ಮಳೆ: 1304.40 ಮಿ.ಮೀ.,
ಕಳೆದ ವರ್ಷ ಇದೇ ಅವಧಿಯಲ್ಲಿ: 2647.96 ಮಿ.ಮೀ. ಮಳೆಯಾಗಿತ್ತು.
ಹಾರಂಗಿ ಜಲಾಶಯದ ನೀರಿನ ಮಟ್ಟ
- ಹಾರಂಗಿ ಜಲಾಶಯದ ಗರಿಷ್ಠ ಮಟ್ಟ: 2,859 ಅಡಿ
- ಇಂದಿನ ನೀರಿನ ಮಟ್ಟ : 2842.55 ಅಡಿ
- ಕಳೆದ ವರ್ಷ ಇದೇ ದಿನ : 2858.09 ಅಡಿ
- ಹಾರಂಗಿಯಲ್ಲಿ ಬಿದ್ದ ಮಳೆ : 46.80 ಮಿ.ಮೀ.
- ಕಳೆದ ವರ್ಷ ಇದೇ ದಿನ : 6.80 ಮಿ.ಮೀ.
- ಇಂದಿನ ನೀರಿನ ಒಳಹರಿವು : 8926 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು : 5083ಕ್ಯೂಸೆಕ್
- ಇಂದಿನ ನೀರಿನ ಹೊರಹರಿವು ನದಿಗೆ : 30ಕ್ಯೂಸೆಕ್
- ಕಳೆದ ವರ್ಷ ಇದೇ ದಿನ ನದಿಗೆ : 2867, ನಾಲೆಗೆ 1400ಕ್ಯೂಸೆಕ್
ತುಂಗಭದ್ರಾ ಜಲಾಶಯದ ನೀರಿನ ವಿವರ
- ಇಂದಿನ ನೀರಿನ ಮಟ್ಟ: 1616.30 ಅಡಿ
- ಗರಿಷ್ಠ ಮಟ್ಟ : 1633 ಅಡಿ
- ನೀರಿನ ಸಂಗ್ರಹ : 48.795 ಟಿಎಂಸಿ
- ಒಳಹರಿವು : 102443 ಕ್ಯೂಸೆಕ್
- ಹೊರ ಹರಿವು : 2194 ಕ್ಯೂಸೆಕ್
ಕಳೆದ ವರ್ಷ 08-08-2018
- ನೀರಿನ ಮಟ್ಟ : 1632.31 ಅಡಿ
- ಗರಿಷ್ಠ ಮಟ್ಟ : 1633 ಅಡಿ
- ನೀರಿನ ಸಂಗ್ರಹ : 98.201 ಟಿಎಂಸಿ
- ಒಳಹರಿವು : 22457 ಕ್ಯೂಸೆಕ್
- ಹೊರ ಹರಿವು : 28790 ಕ್ಯೂಸೆಕ್