ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಇಂದು 348 ಮಂದಿಗೆ ಸೋಂಕು ದೃಢ: ಕೋವಿಡ್ ಸಾವಿನ ಸಂಖ್ಯೆ ಶೂನ್ಯ! - ಇವತ್ತಿನ ಕೋವಿಡ್ ಪ್ರಕರಣ

ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ. 2.11 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 1.53 ರಷ್ಟಿದೆ ಎಂದು ವರದಿಯಾಗಿದೆ. ಸಾವಿನ ಪ್ರಮಾಣ ಇಂದು ಶೂನ್ಯವಾಗಿದ್ದು, ವಾರದ ಸಾವಿನ ಪ್ರಮಾಣ ಶೇ. 0.04 ರಷ್ಟಿದೆ ಎಂದು ವರದಿಯಾಗಿದೆ

todays-covid-report-in-karnataka-and-bengalore
ರಾಜ್ಯದಲ್ಲಿ ಇಂದು 348 ಮಂದಿಗೆ ಸೋಂಕು ದೃಢ : ಕೋವಿಡ್ ಸಾವಿನ ಸಂಖ್ಯೆ ಶೂನ್ಯ!

By

Published : Jun 7, 2022, 9:56 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 16,474 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಒಟ್ಟು 348 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು ಒಟ್ಟು 311 ಮಂದಿ ಗುಣಮುಖರಾಗಿದ್ದು,ರಾಜ್ಯದಲ್ಲಿ ಇದುವರೆಗೂ 39,11,351 ಮಂದಿ ಗುಣಮುಖರಾಗಿದ್ದಾರೆ. ಇಂದು ಕೋವಿಡ್ ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ.

ಸದ್ಯ ರಾಜ್ಯದಲ್ಲಿ 2478 ಸಕ್ರಿಯ ಪ್ರಕರಣಗಳಿವೆ ಎಂದು ವರದಿಯಾಗಿದೆ. ಸದ್ಯ ಸೋಂಕಿತರ ಪ್ರಮಾಣ ಶೇ. 2.11 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 1.53 ರಷ್ಟಿದೆ ಎಂದು ವರದಿಯಾಗಿದೆ. ಸಾವಿನ ಪ್ರಮಾಣ ಇಂದು ಶೂನ್ಯವಾಗಿದ್ದು, ವಾರದ ಸಾವಿನ ಪ್ರಮಾಣ ಶೇ. 0.04 ರಷ್ಟಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಲ್ಲಿ ಇಂದು ಒಟ್ಟು 4525 ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದು , ಇದುವರೆಗೂ ಒಟ್ಟು 1021205 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ, ಇಂದು 339 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,89,456 ಕ್ಕೆ ಏರಿಕೆ ಆಗಿದೆ. ಇಂದು 277 ಮಂದಿ ಗುಣಮುಖರಾಗಿದ್ದು, ಇದುವರೆಗೂ 17,70,101 ಮಂದಿ ಗುಣಮುಖರಾಗಿದ್ದಾರೆ. ಇಂದು ಕೋವಿಡ್ ನಿಂದ ಯಾವುದೇ ಸಾವು ಸಂಭವಿಸಿಲ್ಲ. ಕೋವಿಡ್ ಸಾವಿನ ಸಂಖ್ಯೆ 16,964 ಏರಿಕೆ ಆಗಿದ್ದು, ಸದ್ಯ 2390 ಸಕ್ರಿಯ ಪ್ರಕರಣಗಳು ಇವೆ ಎಂದು ವರದಿಯಾಗಿದೆ.

ಓದಿ :ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಟಾಟಾ ಸಂಸ್ಥೆ ಸಹಯೋಗದಲ್ಲಿ ಕ್ಯಾನ್ಸರ್ ಕೇರ್ ಸೆಂಟರ್‌ ಆರಂಭ

ABOUT THE AUTHOR

...view details