ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 1,692 ಮಂದಿಗೆ ಕೋವಿಡ್ ಸೋಂಕು.. ಇಬ್ಬರು ಸಾವು - covid reports of bamglore

ರಾಜ್ಯದಲ್ಲಿಂದು ಒಟ್ಟು 1,692 ಮಂದಿಗೆ ಕೊರೊನಾ ಸೋಂಕು ದೃಢ- ಕೋವಿಡ್ ಸಕ್ರಿಯ ಸೋಂಕು ಪ್ರಕರಣಗಳು 11,105ಕ್ಕೆ ಏರಿಕೆ- ಇಬ್ಬರು ಸಾವು

todays-covid-health-bulletin-in-karnataka-and-banglore
ರಾಜ್ಯದಲ್ಲಿಂದು 1,692 ಮಂದಿಗೆ ಕೋವಿಡ್ ಸೋಂಕು, ಇಬ್ಬರು ಸೋಂಕಿತರು ಸಾವು

By

Published : Jul 31, 2022, 9:21 PM IST

ಬೆಂಗಳೂರು : ರಾಜ್ಯದಲ್ಲಿಂದು ಒಟ್ಟು 1,692 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ. ರಾಜ್ಯಾದ್ಯಂತ ಇಂದು 33,320 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 1,692 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು 1,094 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಒಟ್ಟು 11,105 ಕೋವಿಡ್ ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಶೇ.5.07 ರಷ್ಟಿದ್ದು, ವಾರದ ಸೋಂಕಿತರ ಪ್ರಮಾಣ ಶೇ.6.05ರಷ್ಟಿದೆ. ಈ ವಾರದ ಸಾವಿನ ಪ್ರಮಾಣ ಶೇ.0.11 ಇದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಇಂದು ಒಟ್ಟು 1,154 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,36,068 ಕ್ಕೆ ಏರಿಕೆಯಾಗಿದೆ. ಇಂದು 861 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ ಕೋವಿಡ್ ಸಾವಿನ ಸಂಖ್ಯೆ 16,974 ದಾಖಲಾಗಿದೆ. ರಾಜಧಾನಿಯಲ್ಲಿ ಒಟ್ಟು 8,595 ಕೋವಿಡ್ ಸಕ್ರಿಯ ಪ್ರಕರಣಗಳಿವೆ ಎಂದು ವರದಿಯಾಗಿದೆ.

ಓದಿ :ಭಾರತದಲ್ಲಿ ಶಂಕಿತ ಮಂಕಿಪಾಕ್ಸ್​ಗೆ​ ಮೊದಲ ಬಲಿ: ಯುಎಇಯಿಂದ ಕೇರಳಕ್ಕೆ ಬಂದಿದ್ದ ಯುವಕ ಸಾವು

ABOUT THE AUTHOR

...view details