ಬೆಂಗಳೂರು: ರಾಜ್ಯದಲ್ಲಿಂದು 1,70,306 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1116 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ಮೂಲಕ 29,64,083 ಕ್ಕೆ ಒಟ್ಟು ಸೋಂಕಿನ ಪ್ರಮಾಣ ಏರಿಕೆ ಕಂಡಿದೆ. ಪಾಸಿಟಿವಿಟಿ ದರ 0.65% ರಷ್ಟು ದಾಖಲಾಗಿದೆ. 970 ಸೋಂಕಿತರು ಗುಣಮುಖರಾಗಿದ್ದಾರೆ. ಈ ತನಕ 29,10,626 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳು 15,892 ಇದೆ.
08 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,537 ಕ್ಕೆ ಏರಿದೆ. ಈ ಮೂಲಕ ಸಾವಿನ ಶೇಕಡಾವಾರು 0.71 ದಾಖಲಾಗಿದೆ. ವಿಮಾನ ನಿಲ್ದಾಣದಿಂದ 825 ಪ್ರಯಾಣಿಕರು ಆಗಮಿಸಿದ್ದು, ಯುಕೆಯಿಂದ 81 ಪ್ರಯಾಣಿಕರು ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ. ಕಳೆದೊಂದು ವಾರದಿಂದ ಇಳಿಕೆ ಕಂಡಿದ್ದ ಸೋಂಕಿತರ ಸಂಖ್ಯೆ ಇದೀಗ ಮತ್ತೆ ಸಾವಿರದತ್ತ ಮುಖ ಮಾಡಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ.