ಕರ್ನಾಟಕ

karnataka

ETV Bharat / state

ಶಾಸಕರಿಗೆ ಆಮಿಷ ಒಡ್ಡಿ ರಾಜೀನಾಮೆ ನೀಡಿಸುವುದು ನೈತಿಕತೆಯೇ? : ಸಚಿವ ಕೃಷ್ಣಬೈರೇಗೌಡ ಪ್ರಶ್ನೆ - undefined

ಇಂದು ವಿಶ್ವಾಸಮತ ನಿರ್ಣಯದ ಮೇಲೆ ನಡೆದ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಚಿವ ಕೃಷ್ಣಬೈರೇಗೌಡ ರೆಬಲ್​​ ಶಾಸಕರು ಸೇರಿದಂತೆ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕೃಷ್ಣಬೈರೇಗೌಡ

By

Published : Jul 22, 2019, 5:12 PM IST

Updated : Jul 22, 2019, 5:26 PM IST

ಬೆಂಗಳೂರು :ವಿಶ್ವಾಸಮತ ಯಾಚನೆ ವಿಳಂಬ ಮಾಡಿದರೆ ಅನೈತಿಕತೆ ಆಗುತ್ತದೆ. ಆದರೆ ನಮ್ಮ ಶಾಸಕರಿಗೆ ಆಮಿಷ ಒಡ್ಡಿ ರಾಜೀನಾಮೆ ನೀಡುವಂತೆ ಒತ್ತಡ ಹೇರಿದರೆ ಅದು ನೈತಿಕತೆಯೇ ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಬಿಜೆಪಿ ವಿರುದ್ಧ ವಿಧಾನಸಭೆಯಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ವಿಶ್ವಾಸಮತ ಒಂದೇ ಇಲ್ಲಿನ ಚರ್ಚೆ ಎಂಬಂತೆ ವಿರೋಧ ಪಕ್ಷದವರೂ, ಮಾಧ್ಯಮದವರು ಬಿಂಬಿಸುತ್ತಿದ್ದಾರೆ. ಆದರೆ ಕೆಲವು ಶಾಸಕರು ಏಕೆ ರಾಜೀನಾಮೆ ನೀಡಿದ್ದಾರೆ ಎಂಬುದರ ಬಗ್ಗೆಯೂ ಚರ್ಚೆಯಾಗಲಿ, ಈ ಬಗ್ಗೆ ಸದನ ಬೆಳಕು ಚೆಲ್ಲಲಿ, ನಿಮಗೆ ವಿಶ್ವಾಸಮತ ಯಾಚನೆ ಬಗ್ಗೆ ಅವಸರವಿರಬಹುದು, ಆದರೆ ನಮಗೆ ಈ ಎಲ್ಲಾ ವಿಷಯಗಳು ಬೆಳಕಿಗೆ ಬರಬೇಕು ಎಂಬ ಉದ್ದೇಶವಿದೆ ಎಂದು ಹೇಳಿದರು.

ಸದನದಲ್ಲಿ ಪ್ರಶ್ನೆ ಕೇಳಿದ ಕೃಷ್ಣಬೈರೇಗೌಡ

ರಮೇಶ್ ಜಾರಕಿಹೊಳಿ ಕಳೆದ ಏಳೆಂಟು ತಿಂಗಳಿಂದ ನಿರಂತರವಾಗಿ ಬಿಜೆಪಿ ಸಂಪರ್ಕದಲ್ಲಿದ್ದರು. ಲೋಕಸಭಾ ಚುನಾವಣೆಯಲ್ಲಿಯೂ ಅವರು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಈಗಾಗಲೇ ದೂರು ನೀಡಲಾಗಿದೆ. ಜಾರಕಿಹೊಳಿ ಮತ್ತು ಬಿಜೆಪಿ ನಡುವೆ ಅನ್ಯೋನ್ಯತೆ ಇತ್ತು ಎಂಬುದು ಇದರಿಂದ ಸ್ಪಷ್ಟಗೊಂಡಿದೆ ಅಲ್ಲದೇ ಮತ್ತೊಬ್ಬ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದರು. ಅವರನ್ನು ಕೂಡ ಬಿಜೆಪಿ ಸಂಪರ್ಕಿಸಿ ಹಣದ ಆಮಿಷ ಒಡ್ಡಿತ್ತು. ಈಗ ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಇವೆಲ್ಲಾ ನನ್ನ ಕಲ್ಪನೆಗಳಲ್ಲ, ಇವೆಲ್ಲವೂ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿ. ಬಿ.ಸಿ.ಪಾಟೀಲ್ ಮತ್ತು ಬಿಜೆಪಿ ಮುಖಂಡರೊಬ್ಬರು ಮಾತನಾಡಿದ ಆಡಿಯೋ ಬಹಿರಂಗವಾಗಿದೆ ಎಂದು ತಿಳಿಸಿದರು.

ಬಡವರು ಕಷ್ಟಪಟ್ಟು ದುಡಿದ, ಮನೆಗಳನ್ನು ಲೀಸ್‌ಗೆ ಹಾಕಿ ಪಡೆದ ದುಡ್ಡನ್ನು ಬಂಡವಾಳ ಹೂಡಿದ ಐಎಂಎ ಕಂಪನಿಯ ಮಾಲೀಕ, ಸಾರ್ವಜನಿಕರಿಗೆ ವಂಚನೆ ಮಾಡಿ ಪರಾರಿಯಾಗುವಾಗ ಬಿಡುಗಡೆ ಮಾಡಿದ ಆಡಿಯೋದಲ್ಲಿ 'ಒಬ್ಬ ಶಾಸಕ' ತಮ್ಮಿಂದ ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪಿತ ಶಾಸಕ ಕೂಡ ತಾವು ಬಿಜೆಪಿಗೆ ಸೇರುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೂ ಬಿಜೆಪಿ ಪ್ರೇರಣೆ ಇಲ್ಲವೇ ? ಇದು ಬಿಜೆಪಿಯ ನೈತಿಕತೆಯೇ ? ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದರು.

Last Updated : Jul 22, 2019, 5:26 PM IST

For All Latest Updates

TAGGED:

ABOUT THE AUTHOR

...view details