ಕರ್ನಾಟಕ

karnataka

ETV Bharat / state

ಇಂದು RSS ಪ್ರಮುಖರ ಸಭೆ; ನೂತನ ಸಿಎಂ ಕುರಿತು ನಡೆಯುತ್ತಾ ಚರ್ಚೆ? - ಯಡಿಯೂರಪ್ಪ ರಾಜಿನಾಮೆ

ಬಿ.ಎಲ್ ಸಂತೋಷ್ ಅವರ ಹೆಸರು ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು ನಾಳಿನ ಆರ್.ಎಸ್.ಎಸ್ ಸಭೆಯಲ್ಲಿ ಸಂತೋಷ್ ಕೂಡ ಭಾಗಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.‌ ಸಂತೋಷ್ ಹೆಸರಿಗೆ ಆರ್.ಎಸ್.ಎಸ್.ಪ್ರಮುಖರು ಆಧ್ಯತೆ ನೀಡಿದಲ್ಲಿ ಆ ಹೆಸರನ್ನೇ ಹೈಕಮಾಂಡ್ ಪರಿಗಣಿಸಬೇಕಾಗಲಿದೆ. ಹಾಗಾಗಿ ನಾಳಿನ ಆರ್.ಎಸ್.ಎಸ್. ಪ್ರಮುಖರ ಸಭೆ ಮಹತ್ವದ್ದಾಗಿದೆ.

RSS meeting
ಆರ್​ಎಸ್​ಎಸ್​ ಸಭೆಯಲ್ಲಿ ಸಿಎಂ ಆಯ್ಕೆ ಚರ್ಚೆ

By

Published : Jul 27, 2021, 1:52 AM IST

ಬೆಂಗಳೂರು:ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಕೆ ಮಾಡಿದ ಬೆನ್ನಲ್ಲೇ ಆರ್.ಎಸ್.ಎಸ್ ಪ್ರಮುಖರ ವಿಶೇಷ ಸಭೆ ನಿಗದಿಯಾಗಿದ್ದು ನೂತನ ಸಿಎಂ ಆಯ್ಕೆ ಕುರಿತು ಮಹತ್ವದ ಸಮಾಲೋಚನೆ ನಡೆಯಲಿದೆ ಎನ್ನಲಾಗಿದೆ.

ಮಂಗಳವಾರ ಚಾಮರಾಜಪೇಟೆಯಲ್ಲಿರುವ ಆರ್.ಎಸ್.ಎಸ್.ರಾಜ್ಯ ಪ್ರಧಾನ ಕಚೇರಿ ಕೇಶವಕೃಪಾದಲ್ಲಿ ಪ್ರಮುಖರ ಸಭೆ ನಡೆಯಲಿದ್ದು, ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಆರ್.ಎಸ್.ಎಸ್. ರಾಷ್ಟ್ರೀಯ ಸಹ ಕಾರ್ಯವಾಹ ಮುಕುಂದಗ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ. ಪ್ರಮುಖರ ಸಭೆಗಾಗಿ ಪೂರ್ವನಿಗದಿತ ಬೆಂಗಳೂರು ನಗರ ಬೈಠಕ್​ಅನ್ನು ಮೊಟಕುಗೊಳಿಸಲಾಗಿದೆ.

ಬಿಎಲ್ ಸಂತೋಷ್
ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಹುದ್ದೆಗೆ ಹೆಸರು ಅಂತಿಮಗೊಳಿಸಬೇಕಿದ್ದು, ಈ ಸಂದರ್ಭದಲ್ಲಿ ಆರ್.ಎಸ್.ಎಸ್ ಪ್ರಮುಖರ ಸಭೆ ನಡೆಯುತ್ತಿರುವುದು ವಿಶೇಷ. ಆರ್.ಎಸ್.ಎಸ್.ಸಮ್ಮತಿಯ ವ್ಯಕ್ತಿಯನ್ನೇ ಮುಖ್ಯಮಂತ್ರಿ ಮಾಡಬೇಕು ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಈಗಾಗಲೇ ಬಂದಿದ್ದು, ಆ ನಿಟ್ಟಿನಲ್ಲೇ ಅಭ್ಯರ್ಥಿ ಹುಡುಕಾಟ ನಡೆಸುತ್ತಿದೆ.

ಇದನ್ನು ಓದಿ:ನಾಲ್ಕು ಬಾರಿ ಸಿಎಂ ಆದ್ರೂ ಪೂರ್ಣಾವಧಿ ಪೂರೈಸಲಿಲ್ಲ; ಏಳು-ಬೀಳುಗಳಲ್ಲೇ ನಡೀತು ಬಿಎಸ್‌ವೈ ಅಧಿಕಾರಾವಧಿ

ಬಿ.ಎಲ್ ಸಂತೋಷ್ ಹೆಸರು ಕೂಡ ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು ನಾಳಿನ ಆರ್.ಎಸ್.ಎಸ್ ಸಭೆಯಲ್ಲಿ ಸಂತೋಷ್ ಕೂಡ ಭಾಗಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.‌ ಸಂತೋಷ್ ಹೆಸರಿಗೆ ಆರ್.ಎಸ್.ಎಸ್.ಪ್ರಮುಖರು ಆಧ್ಯತೆ ನೀಡಿದಲ್ಲಿ ಆ ಹೆಸರನ್ನೇ ಹೈಕಮಾಂಡ್ ಪರಿಗಣಿಸಬೇಕಾಗಲಿದೆ. ಹಾಗಾಗಿ ನಾಳಿನ ಆರ್.ಎಸ್.ಎಸ್. ಪ್ರಮುಖರ ಸಭೆ ಮಹತ್ವದ್ದಾಗಿದೆ.

ಆರ್.ಎಸ್.ಎಸ್ ರಾಜಕೀಯ ವಿಚಾರದ ಕುರಿತು ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಬಹಿರಂಗವಾಗಿ ಹೇಳುವುದಿಲ್ಲ, ಅದರಂತೆ ನಾಳಿನ ರಾಜಕೀಯ ನಿರ್ಧಾರ ಕುರಿತು ಬಹಿರಂಗವಾಗಿ ಯಾವ ಮಾಹಿತಿಯನ್ನೂ ನೀಡದೇ ನೇರವಾಗಿ ಬಿಜೆಪಿ ಹೈಕಮಾಂಡ್ ಗೆ ಸಂದೇಶ ರವಾನಿಸಲಿದೆ‌.

ಇದನ್ನು ಓದಿ: ಈಗಿನ ಬಿಎಸ್​​​ವೈ ಸ್ಥಿತಿಗೆ ಅವರ ಮಗ ವಿಜಯೇಂದ್ರನೇ ಕಾರಣ : ಹೆಚ್​​.ವಿಶ್ವನಾಥ್

ABOUT THE AUTHOR

...view details