ಕರ್ನಾಟಕ

karnataka

ETV Bharat / state

ಇಂದಾದ್ರೂ ಅರುಣ್​ ಸಿಂಗ್​ರನ್ನು ಭೇಟಿಯಾಗ್ತರಾ ರೆಬೆಲ್​ ಶಾಸಕರು! - ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​,

ರಾಜ್ಯ ರಾಜಕೀಯ ಕುತೂಹಲ ಘಟ್ಟಕ್ಕೆ ತೆರಳಿದೆ. ನಿನ್ನೆ ರೆಬೆಲ್​ ಶಾಸಕರು ಅರುಣ್​ ಸಿಂಗ್​ ಭೇಟಿಗೆ ತೆರಳಿದ್ದರು. ಆದ್ರೆ ಅವರನ್ನು ಭೇಟಿಯಾಗದೇ ವಾಪಾಸ್​ ಬಂದ ಹಿನ್ನೆಲೆ ಇಂದಾದ್ರೂ ಅರುಣ್​ ಸಿಂಗ್​ರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

Rebel MLAs Meet to Arun Singh, Today Rebel MLAs Meet to Arun Singh in Bangalore, BJP state in charge Arun singh, BJP state in charge Arun singh news, ಅರುಣ್​ ಸಿಂಗ್​ರನ್ನು ಭೇಟಿಯಾಗ್ತರಾ ರೆಬೆಲ್​ ಶಾಸಕರು, ಬೆಂಗಳೂರಿನಲ್ಲಿ ಅರುಣ್​ ಸಿಂಗ್​ರನ್ನು ಭೇಟಿಯಾಗ್ತರಾ ರೆಬೆಲ್​ ಶಾಸಕರು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ಸುದ್ದಿ,
ಇಂದಾದ್ರೂ ಅರುಣ್​ ಸಿಂಗ್​ರನ್ನು ಭೇಟಿಯಾಗ್ತರಾ ರೆಬೆಲ್​ ಶಾಸಕರು

By

Published : Jun 18, 2021, 4:19 AM IST

ಬೆಂಗಳೂರು: ನಾಯಕತ್ವ ಬದಲಾವಣೆಯಾಗಲಿದೆ, ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು ಹೇಳುತ್ತಲೇ ಬರುತ್ತಿದ್ದ ವಿರೋಧಿ ಬಣದ ಕೇಂದ್ರ ಬಿಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ರನ್ನು ಭೇಟಿ ಮಾಡಲಿಲ್ಲ. ಗೊಂದಲ ಪರಿಹಾರಕ್ಕಾಗಿ ಬಂದ ಅರುಣ್ ಸಿಂಗ್ ಗೊಂದಲದ ಮೂಲವನ್ನೇ ಭೇಟಿಯಾಗಲಿಲ್ಲ.

ನಾಯಕತ್ವದ ವಿರುದ್ಧ ಅಸಮಧಾನ ಇರುವ ಶಾಸಕರ ಅಹವಾಲು ಆಲಿಸಲು ಹೈಕಮಾಂಡ್ ಪ್ರತಿನಿಧಿಯಾಗಿ ಆಗನಿಸಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಿನ್ನೆ ಶಾಸಕರ ಅಹವಾಲು ಆಲಿಸಿದರು. ಯಾರಿಗೆಲ್ಲಾ ಅಸಮಧಾನ ಇದೆಯೋ ಅವರೆಲ್ಲಾ ಬಂದು ಮಾತನಾಡಬಹುದು ಎಂದು ಸಮಯಾವಕಾಶ ನೀಡಿದ್ದರು.

52 ಸದಸ್ಯರು ನಿನ್ನೆ ಅರುಣ್ ಸಿಂಗ್​ರನ್ನು ಭೇಟಿ ಮಾಡಿದರು. ಆದರೆ ಗೊಂದಲ ಕೇಂದ್ರವಾಗಿರುವ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ ಬೆಲ್ಲದ್ ಮಾತ್ರ ರಾಜ್ಯ ಉಸ್ತುವಾರಿಯ ಭೇಟಿ ಮಾಡಲಿಲ್ಲ.

ಈಗಾಗಲೇ ಪಕ್ಷ ವಿರೋಧಿ ಹೇಳಿಕೆ ಕಾರಣಕ್ಕಾಗಿ ಶೋಕಾಸ್ ನೋಟಿಸ್ ನೀಡಿರುವ ಕಾರಣ ಮುಂದಿಟ್ಟು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಅರುಣ್ ಸಿಂಗ್ ಭೇಟಿ ಮಾಡಲು ಸಮಯಾವಕಾಶ ನಿರಾಕರಿಸಲಾಗಿತ್ತು ಎನ್ನುವ ಮಾತುಗಳು ಕೇಳಿಬಂದಿದ್ದವು. ಅನುಮತಿ ಸಿಗದ ಕಾರಣ ಭೇಟಿ ನಡೆದಿಲ್ಲ ಎನ್ನಲಾಗಿತ್ತು. ಆದರೆ ಇದನ್ನು ಅಲ್ಲಗಳೆದಿರುವ ಯತ್ನಾಳ್, ಮಮಾಧ್ಯಮ ಮಿತ್ರರೇ ನಾನು ಅರುಣ್ ಸಿಂಗ್ ಅವರ ಭೇಟಿಗೆ ಅವಕಾಶ ಕೇಳಿಲ್ಲ. ಸುಳ್ಳು ಸುದ್ದಿ ಬಿತ್ತರಿಸಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸ್ಪಷ್ಟೀಕರಣ ನೀಡಿದ್ದಾರೆ.

ಇನ್ನು ಸಿಎಂ ರೇಸ್​ನಲ್ಲಿ ಹೆಸರು ಕೇಳಿಬಂದಿರುವ ಅರವಿಂದ ಬೆಲ್ಲದ್ ಕೊನೆ ಕ್ಷಣದಲ್ಲಿ ಅರುಣ್ ಸಿಂಗ್ ಭೇಟಿಯಿಂದ ದೂರ ಉಳಿದರು.‌ ನಿನ್ನೆ ಸಂಜೆ 4.30 ಕ್ಕೆ ಅವಕಾಶ ನೀಡಿದ್ದು, ಈಗ ಹೋಗಿ ಭೇಟಿ ಮಾಡುತ್ತೇನೆ ಎನ್ನುತ್ತಾ ಕುಮಾರಕೃಪಾ ಅತಿಥಿಗೃಹದಿಂದ ಹೊರಟ ಬೆಲ್ಲದ್ ನಂತರ ನಿರ್ಧಾರ ಬದಲಿಸಿ ಅರುಣ್ ಸಿಂಗ್​ರ ಭೇಟಿ ಮಾಡದೆ ಶಾಸಕರ ಭವನಕ್ಕೆ ಮರಳಿದ್ದರು. ದೂರವಾಣಿ ಕದ್ದಾಲಿಕೆ ಆರೋಪ ಮಾಡಿದ ನಂತರ ಪಕ್ಷದ ಕಚೇರಿಯಲ್ಲಿ ಬಿಜೆಪಿ ನಾಯಕರು ಕೆಂಡ ಕಾರುತ್ತಿದ್ದ ಸುದ್ದಿ ತಿಳಿದು ಪಕ್ಷದ ಕಚೇರಿಯಿಂದ ದೂರ ಉಳಿದಿರಬಹುದು ಎನ್ನಲಾಗಿದೆ.

ABOUT THE AUTHOR

...view details