ಬೆಂಗಳೂರು: ಇಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಸಿಎಂ ನಿವಾಸ ಕಾವೇರಿ ಹಾಗು ಗೃಹ ಕಚೇರಿ ಕೃಷ್ಣಾ ಸ್ತಬ್ಧವಾಗಿದೆ.
ಜನತಾ ಕರ್ಫ್ಯೂಗೆ ಕಾವೇರಿ, ಗೃಹ ಕಚೇರಿ ಕೃಷ್ಣಾ ಸ್ತಬ್ಧ - bengalore latest news
ಜನತಾ ಕರ್ಪ್ಯೂನಿಂದ ಯಾವುದೇ ಕಾರ್ಯಕ್ರಮ, ಸಭೆ ಹಮ್ಮಿಕೊಳ್ಳದೆ ಸಿಎಂ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೊರೊನಾ ಕುರಿತಂತೆ ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗಷ್ಟೇ ಭೇಟಿಗೆ ಅವಕಾಶ ನೀಡಿದ್ದಾರೆ.
![ಜನತಾ ಕರ್ಫ್ಯೂಗೆ ಕಾವೇರಿ, ಗೃಹ ಕಚೇರಿ ಕೃಷ್ಣಾ ಸ್ತಬ್ಧ today No one officer and minister visits CM House](https://etvbharatimages.akamaized.net/etvbharat/prod-images/768-512-7325204-thumbnail-3x2-viji.jpg)
ಜನತಾ ಕರ್ಫ್ಯೂಗೆ ಕಾವೇರಿ, ಗೃಹ ಕಚೇರಿ ಕೃಷ್ಣಾ ಸ್ತಬ್ಧ
ಸಚಿವರು, ಶಾಸಕರು, ಅಧಿಕಾರಿಗಳಿಲ್ಲದೇ ಸಿಎಂ ಮನೆ ಹಾಗು ಕಚೇರಿ ಖಾಲಿ ಖಾಲಿಯಾಗಿವೆ. ಕೇವಲ ಭದ್ರತಾ ಸಿಬ್ಬಂದಿಯಷ್ಟೇ ಹಾಜರಾಗಿದ್ದು, ಉಳಿದಂತೆ ಶಾಸಕರು, ಸಚಿವರು ಯಾರು ಕೂಡ ಸಿಎಂ ಮನೆ, ಕಚೇರಿ ಕಡೆ ಸುಳಿದಿಲ್ಲ.
ಜನತಾ ಕರ್ಪ್ಯೂ ನಿಂದ ಯಾವುದೇ ಕಾರ್ಯಕ್ರಮ, ಸಭೆ ಹಮ್ಮಿಕೊಳ್ಳದೆ ಸಿಎಂ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೊರೊನಾ ಕುರಿತಂತೆ ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗಷ್ಟೇ ಭೇಟಿಗೆ ಅವಕಾಶ ನೀಡಿದ್ದು, ಉಳಿದ ಯಾವುದೇ ವಿಷಯದ ಕುರಿತು ಶಾಸಕರು, ಸಚಿವರಿಗೆ ಇಂದು ಭೇಟಿಗೆ ಅವಕಾಶ ಇಲ್ಲ. ಸಿಎಂ ಹಾದಿಯಲ್ಲೇ ಈಗಾಗಲೇ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ಸಚಿವರು ರದ್ದು ಮಾಡಿದ್ದಾರೆ.