ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯನ್ನು ಉಪರಾಷ್ಟ್ರಪತಿ ಖಂಡಿಸಿದ್ದು, ಭಯೋತ್ಪಾದಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಭಾರತ ಅಷ್ಟೇ ಅಲ್ಲ, ಯಾವುದೇ ದೇಶ ಸುರಕ್ಷಿತವಲ್ಲ. ಭಯೋತ್ಪಾದನೆ ಮೇಲೆ ಕ್ರಮ ಕೈಗೊಳ್ಳದಿದ್ರೆ ವಿಶ್ವಕ್ಕೆ ಕಷ್ಟ. ಉಗ್ರರಿಗೆ ಹಾಗೂ ಅವರಿಗೆ ಸಹಕಾರ ನೀಡುವವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.
215 ಜನ ಅಮಾಯಕರು ನಿನ್ನೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳೇ ಇವರ ಗುರಿ. ಯುವಕರು ಇದರ ಬಗ್ಗೆ ಎಚ್ಚೆತ್ತುಕೊಳ್ಳಲೇ ಬೇಕು. ಪ್ರತಿಯೊಂದು ದೇಶವೂ ಇದರ ಬಗ್ಗೆ ಗಮನ ಹರಿಸಲೇಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದ ಸಮಾರಂಭದಲ್ಲಿ ಮಾತಾನಾಡಿದರು. ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲರು ಹಾಗೂ ಬೆಂಗಳೂರು ವಿವಿ ಕುಲಪತಿ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ದೇಶದ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣ ಶಿಸ್ತನ್ನು ಕಲಿಸಿ, ಕಷ್ಟದ ಸಮಯದಲ್ಲಿ ಕಾಪಾಡುತ್ತದೆ. ವಾಷಿಂಗ್ಟನ್ಗಿಂತ ಬೆಂಗಳೂರಿನಲ್ಲಿ ಉತ್ತಮ ಜ್ಞಾನವಂತರಿದ್ದಾರೆ. ಇವತ್ತಿನ ಯುವಜನತೆಯಲ್ಲಿ ತಾಳ್ಮೆ ಇಲ್ಲ. ಇಂದಿನ ದಿನಗಳಲ್ಲಿ ಪರಿಸರ ತುಂಬಾ ಬದಲಾವಣೆ ಆಗುತ್ತಿದೆ. ಸಮಾಜದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ಯುವಕರು ಬದಲಾವಣೆ ಆಗಬೇಕು ಎಂದರು.