ಕರ್ನಾಟಕ

karnataka

ETV Bharat / state

ಇಂದು ರಾತ್ರಿ ನಡೆಯುವುದು ಪಾರ್ಶ್ವ ಛಾಯಾ ಚಂದ್ರ ಗ್ರಹಣ: ಪ್ರಮೋದ್ ಗಲಿಗಲಿ - ಪಾರ್ಶ್ವ ಛಾಯಾ ಚಂದ್ರ ಗ್ರಹಣ

ವರ್ಷದ ಮೊದಲ ಚಂದ್ರಗಹಣ ಇಂದು ರಾತ್ರಿ ಸಂಭವಿಸುತ್ತಿದೆ. ಇಂದು ರಾತ್ರಿ ನಡೆಯುವುದನ್ನು ಪಾರ್ಶ್ವ ಛಾಯಾ ಅಥವಾ ಅರೆ ಛಾಯಾ ಚಂದ್ರ ಗ್ರಹಣವೆಂದು ಕರೆಯುತ್ತಾರೆ. ಈ ಗ್ರಹಣವನ್ನ ಬರಿಗಣ್ಣಿನಿಂದ ನೋಡಿದರೂ ನೋ‌ ಪ್ರಾಬ್ಲಂ ಎಂದು ನೆಹರೂ ತಾರಾಲಯದ ನಿರ್ದೇಶಕರಾದ ಪ್ರಮೋದ್ ಗಲಗಲಿ ತಿಳಿಸಿದರು.

ಪಾರ್ಶ್ವ ಛಾಯಾ ಚಂದ್ರ ಗ್ರಹಣ, Today night Monn eclipse
ಪ್ರಮೋದ್ ಗಲಿಗಲಿ ಹೇಳಿಕೆ

By

Published : Jan 10, 2020, 8:00 PM IST

ಬೆಂಗಳೂರು :ವರ್ಷದ ಮೊದಲ ಚಂದ್ರ ಗ್ರಹಣ ಇಂದು ರಾತ್ರಿ ಗೋಚವಾಗಲಿದೆ. ಇದನ್ನು ಪಾರ್ಶ್ವ ಛಾಯಾ ಅಥವಾ ಅರೆ ಛಾಯಾ ಚಂದ್ರ ಗ್ರಹಣವೆಂದು ಕರೆಯುತ್ತಾರೆ. ಈ ಗ್ರಹಣವನ್ನು ಬರಿಗಣ್ಣಿನಿಂದ ನೋಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ತಿಳಿಸಿದರು.

ಪ್ರಮೋದ್ ಗಲಿಗಲಿ ಹೇಳಿಕೆ

ಭೂಮಿಯ ದಟ್ಟ ನೆರಳಿನ‌ ಭಾಗವನ್ನು ಮುಟ್ಟದೆಯೇ ಚಂದ್ರ ಹೊರ ಬರುವುದನ್ನೇ ಅರೆ ಛಾಯಾ ಚಂದ್ರಗ್ರಹಣ ಎನ್ನುತ್ತಾರೆ. ಭೂಮಿಯ ನೆರಳು ಸೂರ್ಯನ ಬೆಳಕನ್ನು ನಿರ್ಬಂಧಿಸಿದಾಗ, ಅದು ಚಂದ್ರನ‌ ಮೇಲೆ ಪ್ರತಿಫಲಿಸಿದಾಗ ಚಂದ್ರ ಗ್ರಹಣ ಉಂಟಾಗುತ್ತೆ. ಸೌರಮಂಡಲದಲ್ಲಿ ವಿಸ್ಮಯ ಕಣ್ಣ ಮುಂದೆ ನಡೆದರೂ ಸಹ ಅದನ್ನು ನೋಡುವುದು ಕಷ್ಟ. ಆದರೆ ಜನ ಗಮನಿಸಿ ನೋಡಬಹುದು. ಇನ್ನು ಯೂರೋಪ್, ಆಫ್ರಿಕಾ, ಏಷ್ಯಾ ಹಾಗೂ ಆಸ್ಟ್ರೇಲಿಯಾದಲ್ಲಿ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಭಾರತೀಯ ಕಾಲಮಾನ ಪ್ರಕಾರ, ಇಂದು ರಾತ್ರಿ‌10:30 ರಿಂದ ಮಧ್ಯಕಾಲ 2:30 ರ ವರೆಗೆ ಗ್ರಹಣ ಸಂಭವಿಸಲಿದೆ. ಗ್ರಹಣದ ವೇಳೆ ಚಂದ್ರನ ಮೇಲ್ಮೈಯ ಶೇ.90 ರಷ್ಟು ಭಾಗ ಭೂಮಿಯಿಂದ ಆವರಿಸಲ್ಪಡುತ್ತೆ. ಇನ್ನು ಚಂದ್ರಗ್ರಹಣದ ವೇಳೆ ಊಟ-ನಿದ್ದೆ ಎಲ್ಲವನ್ನು ಮಾಡಬಹುದು. ಇದರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದು ಹೇಳಿದರು.

ABOUT THE AUTHOR

...view details