ಬೆಂಗಳೂರು:ರೈಲು ವಿಳಂಬದಿಂದ ವೈದ್ಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯಬೇಕಿದ್ದ ನೀಟ್ ಪರೀಕ್ಷೆಯಿಂದ ವಂಚಿತರಾದವರಿಗೆ ಇಂದು ಮರು ಪರೀಕ್ಷೆ ನಡೆಸಲಾಯಿತು.
ಅಂತೂ ನೀಟ್ ಪರೀಕ್ಷೆ ಬರೆದ ಎಕ್ಸಾಂ ವಂಚಿತ ವಿದ್ಯಾರ್ಥಿಗಳು - undefined
ರೈಲು ವಿಳಂಬದಿಂದ ವೈದ್ಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯಬೇಕಿದ್ದ ನೀಟ್ ಪರೀಕ್ಷೆಯಿಂದ ವಂಚಿತರಾದವರಿಗೆ ಇಂದು ಮರು ಪರೀಕ್ಷೆ ನಡೆಸಲಾಯಿತು.
Bangalore
ಇಂದು ಬೆಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ ನೀಟ್ ಮರು ಪರೀಕ್ಷೆ ನಡೆದಿದ್ದು, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಇನ್ನು ಈ ಬಾರಿ ರೈಲು ನಿಲ್ದಾಣದ ಸಮೀಪದಲ್ಲಿರುವ ಕೇಂದ್ರಗಳಲ್ಲೇ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ಬೆಂಗಳೂರು ಒಂದೇ ಕೇಂದ್ರದಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಯಿತು.
ಇತ್ತ ಫಣಿ ಚಂಡಮಾರುತದಿಂದ ಒಡಿಶಾದಲ್ಲೂ ನೀಟ್ ಪರೀಕ್ಷೆಯನ್ನ ಮುಂದೂಡಲಾಗಿತ್ತು. ಇಂದು ಒಡಿಶಾದಲ್ಲೂ ನೀಟ್ ಪರೀಕ್ಷೆ ನಡೆಸಲಾಯಿತು.ಪರೀಕ್ಷೆ ಬರೆದು ಹೊರ ಬಂದ ವಿದ್ಯಾರ್ಥಿಗಳ ಮೊಗದಲ್ಲಿ ಪರೀಕ್ಷೆ ಮುಗಿದ ಸಂತಸ ಮನೆ ಮಾಡಿತ್ತು.