ಬೆಂಗಳೂರು :ರಾಜ್ಯದಲ್ಲಿಂದು 1,19,014 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 673 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಪಾಸಿಟಿವ್ ಆದವರ ಸಂಖ್ಯೆ 29,62,408ಕ್ಕೆ ಏರಿಕೆ ಕಂಡಿದೆ.
ಈ ಮೂಲಕ ಪಾಸಿಟಿವಿಟಿ ದರ 0.56% ರಷ್ಟಿದ್ದು, ಸೋಂಕು ಇಳಿಮುಖವಾಗಿದೆ. ಇನ್ನು, ಗುಣಮುಖರ ಸಂಖ್ಯೆ ಹೆಚ್ಚಿದ್ದು 1,074 ಸೋಂಕಿತರು ಗುಣಮುಖರಾಗಿದ್ದಾರೆ. ಈತನಕ 29,08,622 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣ 16,241ರಷ್ಟಿವೆ.
ಇಂದು 13 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,517ಕ್ಕೆ ಏರಿದೆ. ಈ ಮೂಲಕ ಸಾವಿನ ಶೇಕಡಾವಾರು 1.93% ರಷ್ಟಿದೆ. ವಿಮಾನ ನಿಲ್ದಾಣದಿಂದ 4,364 ಪ್ರಯಾಣಿಕರು ಆಗಮಿಸಿದ್ದು, ಯುಕೆಯಿಂದ ಬಂದ 667 ಪ್ರಯಾಣಿಕರು ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ.
ರೂಪಾಂತರಿ ವೈರಸ್ ಅಪಡೇಟ್ಸ್ :
1) ಡೆಲ್ಟಾ ( Delta/B.617.2) - 1092
2)ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೇಟಾ ವೈರಸ್ (BETA/B.1.351) -7
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4 ಮಂದಿ
6) ಈಟಾ (ETA/B.1.525) - 1