ಬೆಂಗಳೂರು:ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಶುಕ್ರವಾರ ಬದಲಾವಣೆ ಕಂಡು ಬಂದಿದೆ. ಬಂಗಾರದ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಆದರೆ, ಇತ್ತ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ದೇಶದ ಪ್ರಮುಖ ಮೆಟ್ರೋಸಿಟಿಗಳು ಮತ್ತು ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರದ ಮಾಹಿತಿ ಇಲ್ಲಿದೆ.
ಇವತ್ತು ಪ್ರತಿ 10 ಗ್ರಾಂ ಬಂಗಾರದ ದರದಲ್ಲಿ 67 ರೂ. ಅಥವಾ ಶೇ.0.13ರಷ್ಟು ಏರಿಕೆಯಾಗಿದ್ದು, ದೇಶದ ಮಾರುಕಟ್ಟೆಯಲ್ಲಿ 52,529 ರೂ.ಗೆ ತಲುಪಿದೆ. ಅದೇ ರೀತಿಯಾಗಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 85 ರೂ. ಅಥವಾ ಶೇ.0.13ರಷ್ಟು ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿಗೆ 67,069 ರೂ. ನಿಗದಿಯಾಗಿದೆ.
ಪ್ರಮುಖ ನಗರಗಳಲ್ಲಿನ ದರ :ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಗಮನಿಸಿದರೆ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ 49,310 ರೂ. ಇದ್ದು, ಚೆನ್ನೈನಲ್ಲಿ 49,470 ರೂ. ಇದೆ. ಅದೇ ರೀತಿಯಾಗಿ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ 1 ಕೆಜೆ ಬೆಳ್ಳಿ ದರ 67,100 ರೂ. ಇದ್ದರೆ, ಚೆನ್ನೈನಲ್ಲಿ 73,000 ರೂ. ಇದೆ.