ಕರ್ನಾಟಕ

karnataka

ETV Bharat / state

ಲಾಕ್​​ಡೌನ್​ ಎಫೆಕ್ಟ್​ನಿಂದ ಗಗನಕ್ಕೇರಿದ ಅಪರಂಜಿ ಬೆಲೆ; ಒಂದು ಗ್ರಾಂ ಚಿನ್ನಕ್ಕೆ___? - gold price

ಜಾಗತಿಕ ಮಾರುಕಟ್ಟೆಯಲ್ಲಿನ ತಲ್ಲಣದಿಂದ ಅಪರಂಜಿಯ ಬೆಲೆ ಗಗನಕ್ಕೇರಿದೆ. ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೇಗಿದೆ ಗೊತ್ತಾ?

Today gold and silver price at Bangaluru
ಗಗನಕ್ಕೇರಿದ ಅಪರಂಜಿ ಬೆಲೆ

By

Published : May 21, 2020, 7:02 PM IST

ಬೆಂಗಳೂರು: ಲಾಕ್​​ಡೌನ್​ ಎಫೆಕ್ಟ್​ನಿಂದ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಇಂದಿನ ಚಿನ್ನದ (ಅಪರಂಜಿ) ಬೆಲೆ ₹ 4820 ಬೆಲೆ ಮುಟ್ಟಿದೆ. ಇನ್ನು 22k ಚಿನ್ನ ₹4420 ಆಗಿದೆ, ಜೊತೆಗೆ ಬೆಳ್ಳಿಯ ಬೆಳೆಯಲ್ಲೂ ಏರಿಕೆಯಾಗಿದ್ದು, ₹48,500 ರೂ. ಆಗಿದೆ.

ಗಗನಕ್ಕೇರಿದ ಅಪರಂಜಿ ಬೆಲೆ

ಸದ್ಯದಲ್ಲಿ ಚಿನ್ನದ ಬೆಲೆ ಏರುತ್ತದೆ ಹೊರತು ಕಡಿಮೆ ಆಗುವುದಿಲ್ಲ, ವಿಶ್ವದಲ್ಲಿ ಕೊರೊನಾ ಹೋಗಬೇಕು ಅಥವಾ ಲಸಿಕೆ ಬರಬೇಕು ಅಲ್ಲಿಯವರೆಗೂ ಚಿನ್ನದ ಬೆಲೆ ಹೆಚ್ಚಾಗುತ್ತದೆ. ಆರ್ಥಿಕತೆ ಹದಗೆಡುತ್ತಿದ್ದು, ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ಚಿನ್ನ ಮಾರಾಟಗಾರ ಸಂಘದ ಸದಸ್ಯ ರವಿಕುಮಾರ್ ಹೇಳಿದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಇವರು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಅಗತ್ಯವಿರುವಷ್ಟು ಆಭರಣ ಖರೀದಿ ಮಾಡಬೇಕು ಎಂದು ಇವರು ಸಲಹೆ ನೀಡಿದರು.

ಚಿನ್ನ ಮಾರಾಟಗಾರ ಸಂಘದ ಸದಸ್ಯ ರವಿಕುಮಾರ್

ABOUT THE AUTHOR

...view details