ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ಇಂದು ಟೆಂಪಲ್ ರನ್ ಮಾಡಲಿದ್ದಾರೆ.
ಇಂದು ಡಿ.ಕೆ ಶಿವಕುಮಾರ್ ಟೆಂಪಲ್ ರನ್: ಯಾವ್ಯಾವ ದೇವಾಲಯಗಳಿಗೆ ಭೇಟಿ? - DK Shivakumar in jail
ಮಧ್ಯಾಹ್ನ 12 ಗಂಟೆಗೆ ದೊಡ್ಡಾಲಹಳ್ಳಿಯಲ್ಲಿ ತಂದೆ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಶ್ರೀ ಕ್ಷೇತ್ರ ಶಿವಗಿರಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ. 12.30 ಕ್ಕೆ ಕಬ್ಬಾಳಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಂಜೆ 3.30 ಕನಕಪುರ ದೇಗುಲ ಮಠಕ್ಕೆ ಭೇಟಿಕೊಡುವರು.

ದಿಲ್ಲಿ ಹೈಕೋರ್ಟ್ನಿಂದ ಜಾಮೀನು ಸಿಕ್ಕ ಹಿನ್ನೆಲೆ ರಾಜ್ಯಕ್ಕೆ ಆಗಮಿಸಿರುವ ಅವರು, ಇಂದು ಬೆಂಗಳೂರಿನ ಸದಾಶಿವನಗರ ನಿವಾಸದಿಂದ ಪ್ರಯಾಣ ಬೆಳಸಲಿದ್ದಾರೆ. ಬೆಳಗ್ಗೆ 10.45 ಕ್ಕೆ ಮನೆ ದೇವರು ಕೆಂಕೇರಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮರಳೆ ಗವಿ ಮಠಕ್ಕೆ ಭೇಟಿ ಕೊಡುವರು.
ಮಧ್ಯಾಹ್ನ 12 ಗಂಟೆಗೆ ದೊಡ್ಡಾಲಹಳ್ಳಿಯಲ್ಲಿ ತಂದೆ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಶ್ರೀ ಕ್ಷೇತ್ರ ಶಿವಗಿರಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ. 12.30 ಕ್ಕೆ ಕಬ್ಬಾಳಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಂಜೆ 3.30 ಕನಕಪುರ ದೇಗುಲ ಮಠಕ್ಕೆ ಭೇಟಿಕೊಡುವರು. ಬಳಿಕ ಕನಕಪುರ ನಿವಾಸಕ್ಕೆ ತೆರಳಲಿರುವ ಡಿ.ಕೆ ಶಿವಕುಮಾರ್ ತಾಯಿಯೊಂದಿಗೆ ಕೆಲಕಾಲ ಸಮಯ ಕಳೆದು ನಂತರ ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.