ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕೊರೊನಾ ಹೊಸ ದಾಖಲೆ: ಒಂದೇ ದಿನ 7,883 ಜನರಿಗೆ ಸೋಂಕು! - ಕೋವಿಡ್ 19

ಇದೇ ಪ್ರಥಮ ಬಾರಿಗೆ ಒಂದೇ ದಿನದಲ್ಲಿ ಏಳು ಸಾವಿರ ದಾಟಿದ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 80,342 ಸೋಂಕಿತರು ಸಕ್ರಿಯವಾಗಿದ್ದು, ಇಂದು 113 ಜನ ಸಾವನ್ನಪ್ಪಿದ್ದಾರೆ. ಚೇತರಿಕೆಯ ಪ್ರಮಾಣ ಶೇ 57.32ರಷ್ಟಿದೆ.

Covid
ಕೊರೊನಾ

By

Published : Aug 12, 2020, 7:43 PM IST

ಬೆಂಗಳೂರು:ಕರ್ನಾಟದಲ್ಲಿ ಮಾರಕ ಕೋವಿಡ್​-19 ಆರ್ಭಟ ಮುಂದುವರೆದಿದ್ದು, ಬುಧವಾಋ ಒಂದೇ ದಿನ ಸುಮಾರು 7,883 ಕೇಸ್​​ ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ಇದೇ ಪ್ರಥಮ ಬಾರಿಗೆ ಒಂದೇ ದಿನದಲ್ಲಿ ಏಳು ಸಾವಿರ ದಾಟಿದ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 80,342 ಸೋಂಕಿತರು ಸಕ್ರಿಯವಾಗಿದ್ದು, ಇಂದು 113 ಜನ ಸಾವನ್ನಪ್ಪಿದ್ದಾರೆ. ಚೇತರಿಕೆಯ ಪ್ರಮಾಣ ಶೇ 57.32ರಷ್ಟಿದೆ.

ಬುಧವಾರದ ದಾಖಲಾದ ಕೊರೊನಾ ಕೇಸ್​

ಇದುವರೆಗೂ 18,26,317 ಜನರನ್ನು ಕೋವಿಡ್​​-19 ಪರೀಕ್ಷೆಗೆ ಒಳಪಡಿಸಲಾಗಿದೆ. 1.82 ಲಕ್ಷ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಬುಧವಾರದಂದು 7,034 ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ಇಂದು 2,802 ಪ್ರಕರಣಗಳು ಕಂಡುಬಂದಿದ್ದು, 23 ಸೋಂಕಿತರು ಬಲಿಯಾಗಿದ್ದಾರೆ. ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 33.489ರಷ್ಟಿದೆ. 2,360 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ABOUT THE AUTHOR

...view details