ಬೆಂಗಳೂರು:ರಾಜ್ಯದಲ್ಲಿ ಮತ್ತೆ ಕೊರೊನಾ ನಾಗಾಲೋಟ ಮುಂದುವರೆದಿದೆ. ಇಂದು ಮತ್ತೆ ರಾಜ್ಯದಲ್ಲಿ 29,438 ಮಂದಿಗೆ ಸೋಂಕು ವಕ್ಕರಿಸಿರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೊನಾ ನಾಗಾಲೋಟ: ಇಂದು 29,438 ಮಂದಿಗೆ ವಕ್ಕರಿಸಿದ ಹೆಮ್ಮಾರಿ - today corona cases in karnatka
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಸಹ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಒಂದೇ ದಿನ ಬರೋಬ್ಬರಿ 29,438 ಜನರಿಗೆ ಸೋಂಕು ತಗುಲಿದ್ದು, 208 ಮಂದಿ ಬಲಿಯಾಗಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 13,04,397ಕ್ಕೆ ಏರಿಕೆ ಆಗಿದೆ. ಇತ್ತ ಸಾವಿನ ಸಂಖ್ಯೆಯು ಏರಿಕೆ ಆಗಿದ್ದು, 208 ಸೋಂಕಿತರು ಹೆಮ್ಮಾರಿಗೆ ಇಂದು ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 14,283ಕ್ಕೆ ಏರಿಕೆ ಆಗಿದೆ.
ಸೋಂಕಿನಿಂದ 9,058 ಮಂದಿ ಗುಣಮುಖರಾಗಿದ್ದು, ಈವರೆಗೆ 10,55,612 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಮತ್ತೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,34,483ಕ್ಕೆ ಏರಿಕೆಯಾಗಿದ್ದು, 1280 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡಾವಾರು 15.52ರಷ್ಟಿದ್ದು, ಸಾವಿನ ಶೇಕಡಾವಾರು ಪ್ರಮಾಣ 0.70ರಷ್ಟಿದೆ.