ಕರ್ನಾಟಕ

karnataka

By

Published : Nov 11, 2021, 8:11 AM IST

Updated : Nov 11, 2021, 10:05 AM IST

ETV Bharat / state

onake obavva Jayanthi: ಇಂದು ಒನಕೆ ಓಬವ್ವ ಜಯಂತಿ... ಮೋದಿ ಸೇರಿ ಶುಭ ಕೋರಿದ ಅನೇಕ ಗಣ್ಯರು

ಒನಕೆ ಓಬವ್ವರ (onake obavva) ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ (Chitradurga History) ಮರೆಯಲಾಗದು. ಅವರನ್ನು ಕರ್ನಾಟಕ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ನವೆಂಬರ್​ 11ರಂದು (ಇಂದು) ವೀರ ವನಿತೆಯ ಜಯಂತಿಯಾಗಿದ್ದು (onake obavva Jayanthi), ರಾಜ್ಯಾದ್ಯಂತ ಸಂಭ್ರಮದಲ್ಲಿದೆ.

onake obavva birth anniversary,  today celebrating onake obavva birth anniversary, onake obavva Jayanthi, onake obavva Jayanthi news,  ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆ, ಇಂದು ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆ, ಒನಕೆ ಓಬವ್ವ ಜಯಂತಿ, ಒನಕೆ ಓಬವ್ವ ಜಯಂತಿ ಸುದ್ದಿ,
ಇಂದು ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆ

ಬೆಂಗಳೂರು: ನವೆಂಬರ್​ 11ರಂದು (ಇಂದು) ವೀರ ವನಿತೆ ಒನಕೆ ಓಬವ್ವ ಜಯಂತಿಯಾಗಿದ್ದು, ಪ್ರಧಾನಿ ಮೋದಿ (PM Modi) ಸೇರಿ ಅನೇಕ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಒನಕೆ ಓಬವ್ವರನ್ನು (onake obavva) ನೆನೆದು ಜಯಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ಒನಕೆ ಓಬವ್ವರ (onake obavva) ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ (Chitradurga History) ಮರೆಯಲಾಗದು, ಅವರನ್ನು ಕರ್ನಾಟಕ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಒನಕೆ ಓಬವ್ವ 18ನೇ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ರಹನುಮಪ್ಪನವರ ಹೆಂಡತಿಯಾಗಿದ್ದರು. ಚಿತ್ರದುರ್ಗದ ಮೇಲೆ ಹೈದರಾಲಿಯ ಸೈನಿಕರು ಹಠಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದರು.

ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಜಜ್ಜಿ, ಹೊಡೆದು ಕೊಂದಿದ್ದರು. ಕೊನೆಯಲ್ಲಿ ಎದುರಾಳಿಯು ಬೆನ್ನ ಹಿಂದೆ ಬಂದದ್ದನ್ನು ಗಮನಿಸಲಾಗದೇ ಶತ್ರುವಿನ ಕತ್ತಿಗೆ ಬಲಿಯಾಗಿದ್ದರು.

ಪ್ರಸ್ತುತ ಆ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಜನಕೆ ಓಬವ್ವನ ಕ್ರೀಡಾಂಗಣ ಎಂದು ಹೆಸರನ್ನಿಟ್ಟು ಗೌರವಿಸಲಾಗಿದೆ. ಒನಕೆ ಓಬವ್ವರ ಜನ್ಮ ದಿನವಾದ ನವೆಂಬರ್ 11ರಂದು (ಇಂದು) ಒನಕೆ ಓಬವ್ವ ಜಯಂತಿಯನ್ನು (onake obavva Jayanthi) ಆಚರಣೆ ಮಾಡುವಂತೆ ಇದೀಗ ತೀರ್ಮಾನಿಸಲಾಗಿದ್ದು, ನ.11ರಂದು ಒನಕೆ ಓಬವ್ವ ಜಯಂತಿಯನ್ನು (onake obavva Jayanthi) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲು ಸರ್ಕಾರ ಆದೇಶಿಸಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ (Karnataka Council Election) ಹಿನ್ನೆಲೆ ನವೆಂಬರ್ 11 ರಂದು (ಇಂದು) ಸರ್ಕಾರ ಓಬವ್ವ ಜಯಂತಿ (Onake Obavva Jayanthi) ಆಚರಣೆಯನ್ನು ಮುಂದೂಡಲಾಗಿದೆ.

Last Updated : Nov 11, 2021, 10:05 AM IST

ABOUT THE AUTHOR

...view details