ಬೆಂಗಳೂರು: ಬಿಎಂಟಿಸಿ ಕೇಂದ್ರ ಕಚೇರಿ ಎದುರು ಇಂದು ಸಾರಿಗೆ ನೌಕರರಿಂದ ಪ್ರತಿಭಟನೆ ನಡೆಸಲಾಗುತ್ತದೆ.
ಇಂದು ಮಧ್ಯಾಹ್ನ 1 ಗಂಟೆಗೆ ಕೆಎಸ್ಆರ್ಟಿಸಿ ನಿಗಮಗಳ ಜಂಟಿ ಕಾರ್ಮಿಕರ ವೇದಿಕೆಯಿಂದ, ಸಾರಿಗೆ ಮುಷ್ಕರದ ವೇಳೆ ನೀಡಿದ್ದ ಭರವಸೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ನಷ್ಟದ ನೆಪದಲ್ಲಿ ಸಾರಿಗೆ ನಿಗಮಗಳನ್ನು ಖಾಸಗೀಕರಿಸಲು ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. 300 ಎಲೆಕ್ಟ್ರಿಕ್ ಬಸ್ಸುಗಳನ್ನು ಗುತ್ತಿಗೆ ಅಡಿ ಪಡೆಯದಂತೆಯೂ ಆಗ್ರಹಿಸಲಾಗಿದೆ.
ಈ ಪ್ರತಿಭಟನೆಯಿಂದಾಗಿ ಬಿಎಂಟಿಸಿ ಪ್ರಯಾಣಿಕರಿಗೆ ಯಾವದೇ ರೀತಿ ತೊಂದರೆಯಾಗದಂತೆ ಸಾರಿಗೆ ಸಂಸ್ಥೆ ನೋಡಿಕೊಳ್ಳುವ ಭರವಸೆ ನೀಡಿದೆ. ಇಂದು ನಡೆಯಲಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗದಂತೆ ಕೆಎಸ್ಆರ್ಟಿಸಿ ಮುನ್ನೆಚ್ಚರಿಕೆ ವಹಿಸಿದೆ.
ಬಸ್ಸುಗಳ ಕಾರ್ಯಾಚರಣೆಗೆ ತೊಂದರೆಯಾಗದಂತೆ ಕೆಎಸ್ಆರ್ಟಿಸಿ ಸುತ್ತೋಲೆ ಹೊರಡಿಸಿದೆ. ಯಾರಿಗೂ ಇಂದು ರಜೆ ಮಂಜೂರು ಮಾಡದಂತೆ ನಿನ್ನೆ ಸುತ್ತೋಲೆ ಹೊರಡಿಸಿದೆ. ಒಂದು ವೇಳೆ ಕೆಲಸ ಬಿಟ್ಟು ಪ್ರತಿಭಟನೆಗೆ ಹಾಜರಾದರೆ, ವೇತನ ಕಡಿತಕ್ಕೂ ಅಡಳಿತ ಮಂಡಳಿ ಆದೇಶಿಸಿದೆ.