'ಭಾರತ ರತ್ನ' ವಿಜ್ಞಾನಿ ಸಿಎನ್ಆರ್ ರಾವ್ಗೆ 87ರ ಸಂಭ್ರಮ.. ಯುವಕರನ್ನ ನಾಚಿಸುವಂತಿದೆ ಅವರ ಸಂಶೋಧನಾಶಕ್ತಿ - ಚಿಂತಾಮಣಿ ನಾಗೇಶ್ ರಾಮಚಂದ್ರರಾವ್
ನಗರದ ಜವಾಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರಾವ್, ಅನೇಕ ದ್ವಿಮಿತೀಯ ಕೃತಕ ರಾಸಾಯನಿಕ ವಸ್ತುಗಳನ್ನು ಸಂಯೋಜಿಸಿದ್ದಾರೆ. ಸೂಪರ್ ಕಂಡಕ್ಟಿವಿಟಿ ಹಾಗೂ ನ್ಯಾನೋ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿ ಭಾರತದಲ್ಲಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಖ್ಯಾತಿ ಪಡೆದಿದ್ದಾರೆ.
ಬೆಂಗಳೂರು: ಭಾರತ ರತ್ನ ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ಗೆ (ಸಿಎನ್ಆರ್ ರಾವ್) ಇಂದು 87ನೆ ವಸಂತಕ್ಕೆ ಕಾಲಿಟ್ಟಿದ್ದು, ಯುವ ಜನತೆ ಆಶ್ಚರ್ಯ ಆಗುವಂತೆ ಇಂದಿಗೂ ಸಂಶೋಧನೆಯಲ್ಲಿ ತೊಡಗಿದ್ದಾರೆ.
ನಗರದ ಜವಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರಾವ್, ಅನೇಕ ದ್ವಿಮಿತೀಯ ಕೃತಕ ರಾಸಾಯನಿಕ ವಸ್ತುಗಳನ್ನು ಸಂಯೋಜಿಸಿದ್ದಾರೆ. ಸೂಪರ್ ಕಂಡಕ್ಟಿವಿಟಿ ಹಾಗೂ ನ್ಯಾನೋವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿ ಭಾರತದಲ್ಲಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಖ್ಯಾತಿ ಪಡೆದಿದ್ದಾರೆ.
ರಾವ್ 42ಕ್ಕೂ ಹೆಚ್ಚು ವೈಜ್ಞಾನಿಕ ಪುಸ್ತಕಗಳು ಹಾಗೂ 1500ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಇವರ ಲೇಖನಗಳನ್ನು ಅಂತಾರಾಷ್ಟ್ರೀಯ ಸೆಮಿನಾರ್ಗಳಲ್ಲಿ ಇದುವರೆಗೂ 40 ಸಾವಿರಕ್ಕೂ ಹೆಚ್ಚು ಬಾರಿ ಪ್ರಸ್ತಾಪಿಸಲಾಗಿದೆ. ಇವರ ಸಂಶೋಧನೆಗಳನ್ನು, ಅನೇಕ ರಾಷ್ಟ್ರಗಳು ಹಲವು ಕೈಗಾರಿಕಾ ಉತ್ಪನ್ನಗಳನ್ನು ಈಗಲೂ ಲಾಭ ಪಡೆಯುತ್ತಿವೆ. ವಿಶೇಷ ಅಂದ್ರೆ ಇವರು ತಮ್ಮ ಸಂಶೋಧನೆಗೆ ಯಾವುದೇ ಪೇಟೆಂಟ್ ಪಡೆದಿಲ್ಲ. ಹೀಗಾಗಿ ಇವರ ಸಂಶೋಧನೆಗಳನ್ನ ಮುಕ್ತವಾಗಿ ಯಾರು ಬೇಕಾದರು ಉಪಯೋಗಿಸಬಹುದು.
ವಿಜ್ಞಾನ ಲೋಕಕ್ಕೆ ಇವರ ಅಪಾರ ಕೊಡುಗೆಯಿಂದ 2004ರಲ್ಲಿ ಭಾರತ ಸರ್ಕಾರ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವ ನೀಡಿತು. ಹಾಗೂ ಈ ವರ್ಷ ಶಕ್ತಿ ಸಂಶೋಧನೆಯಲ್ಲಿ ನೋಬಲ್ ಪ್ರಶಸ್ತಿ ಸಮಾನ ಎಂದು ಕರೆಸಿಕೊಳ್ಳುವ "eni award" ಕೂಡ ಇವರಿಗೆ ದೊರಕಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ನಾಡಿನ ಅನೇಕ ನಾಯಕರು ಇವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ಕೋರಿದ್ದಾರೆ.