ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್- ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳಿಗೆ ಇಂದು ಚುನಾವಣೆ ನಡೆಯಲಿದೆ.
ಬೆಳಗ್ಗೆ 8 ರಿಂದ 9.30ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, 9.30ರಿಂದ 11.30ರ ವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಬೆಳಗ್ಗೆ 11.30ರಿಂದ ಚುನಾವಣೆ ನಡೆಯಲಿದೆ. ಮಾರುಕಟ್ಟೆ, ಆರೋಗ್ಯ, ಲೆಕ್ಕಪತ್ರ ಹಾಗೂ ತೆರಿಗೆ ಮತ್ತುಆರ್ಥಿಕ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯಲಿದ್ದು, ಉಳಿದ ಎಂಟು ಸ್ಥಾಯಿ ಸಮಿತಿಗಳ ಚುನಾವಣೆಗೆ ಹೈಕೋರ್ಟ್ ತಡೆ ನೀಡಿದ್ದರಿಂದ ಒಂದು ವರ್ಷದ ಅವಧಿ ಪೂರ್ಣಗೊಂಡ ಬಳಿಕ ಡಿ.4 ರಂದು ಚುನಾವಣೆ ನಡೆಯಲಿದೆ.
ಪಕ್ಷಗಳ ಬಲಾಬಲ ಹೀಗಿದೆ:
ಒಟ್ಟು ಪಾಲಿಕೆ ಸದಸ್ಯರು - 198
ಇದರಲ್ಲಿ ಕಾಂಗ್ರೆಸ್ 76, ಬಿಜೆಪಿ 101, ಜೆಡಿಎಸ್ 14 ಹಾಗೂ ಪಕ್ಷೇತರರು 7 ಸದಸ್ಯರಿದ್ದಾರೆ.
ಒಟ್ಟು ಲೋಕಸಭಾ ಸದಸ್ಯರು - 5
ಇದರಲ್ಲಿ ಕಾಂಗ್ರೆಸ್ 1, ಬಿಜೆಪಿಯ 5 ಸದಸ್ಯರಿದ್ದಾರೆ.
ಒಟ್ಟು ರಾಜ್ಯಸಭಾ ಸದಸ್ಯರು - 9
ಇದರಲ್ಲಿ ಕಾಂಗ್ರೆಸ್ 6, ಜೆಡಿಎಸ್1, ಬಿಜೆಪಿ 2 ಸದಸ್ಯರಿದ್ದಾರೆ.
ಒಟ್ಟು ಶಾಸಕರು - 23
ಇದರಲ್ಲಿ ಕಾಂಗ್ರೆಸ್ನ 11, ಜೆಡಿಎಸ್ 1, ಬಿಜೆಪಿಯ 11 ಸದಸ್ಯರಿದ್ದಾರೆ.
ಒಟ್ಟು ವಿಧಾನ ಪರಿಷತ್ ಸದಸ್ಯರು - 22
ಇದರಲ್ಲಿ ಕಾಂಗ್ರೆಸ್ 22, ಜೆಡಿಎಸ್ 10, ಬಿಜೆಪಿ 7.
ಒಟ್ಟು ಮತದಾರರ ಸಂಖ್ಯೆ - 257
ಕಾಂಗ್ರೆಸ್ 104, ಬಿಜೆಪಿ 125, ಜೆಡಿಎಸ್ 21, ಪಕ್ಷೇತರರ 7.
ಮ್ಯಾಜಿಕ್ ನಂಬರ್ - 129
ಕಾಂಗ್ರೆಸ್ - 104
ಜೆಡಿಎಸ್- 21
ಪಕ್ಷೇತರ - 6
ಬಿಜೆಪಿ - 125 + 1 ( ಪಕ್ಷೇತರ ಕಾರ್ಪೋರೆಟರ್)
ಚುನಾವಣೆಗೆ ಅನರ್ಹ ಶಾಸಕರ ಬೆಂಬಲಿಗರು ಗೈರು!ಸದ್ಯ ಅನರ್ಹ ಶಾಸಕರ ಸಂಖ್ಯೆ ಕಡಿತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟು ಸಂಖ್ಯಾಬಲ - 125 ಇದೆ. ಬಿಜೆಪಿ ಬಲ ಈಗ 125 ಇದ್ದು, ಪಕ್ಷೇತರ ಕಾರ್ಪೋರೇಟರ್ ಮಮತಾ ಶರವಣ ಹಲಸೂರು ವಾರ್ಡ್ನಿಂದ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಸಂಖ್ಯಾಬಲ 126 ಆಗಿದೆ. ಸದ್ಯ ಮ್ಯಾಜಿಕ್ ನಂಬರ್ಗೆ ಬೇಕಾಗಿರೋದು 3 ಮಾತ್ರ. ಬಹುತೇಕ 5 ಜನ ಪಕ್ಷೇತರರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಮೂವರು ಪಕ್ಷೇತರ ಕಾರ್ಪೋರೇಟರ್ಸ್ ಗೋವಾ ವಾಸ ಮುಗಿಸಿ ವಾಪಾಸ್ಸಾಗಿದ್ದರ ಪರಿಣಾಮ ಬಿಜೆಪಿ ಸಂಖ್ಯೆ 131 ಆಗಲಿದೆ.
ಇಂದು ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ಅನರ್ಹ ಶಾಸಕರ ಬೆಂಬಲಿಗ ಪಾಲಿಕೆ ಸದಸ್ಯರು ಗೈರಾಗಲಿದ್ದಾರೆ. ಪ್ರಮುಖವಾಗಿ ರಾಜರಾಜೇಶ್ವರಿನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಪಾಲಿಕೆ ಸದಸ್ಯರಾದ ವೇಲುನಾಯಕರ್, ಜಿ.ಕೆ.ವೆಂಕಟೇಶ್ (ಎನ್.ಟಿ.ಆರ್) ಶ್ರೀನಿವಾಸ್ ಮೂರ್ತಿ(ಜಾನಿ), ಮೋಹನ್ ಕುಮಾರ್ ನಿನ್ನೆ ನಡೆದ ಕೆಪಿಸಿಸಿ ಸಭೆಗೂ ಗೈರು ಹಾಜರಾಗಿದ್ದು, ಇಂದು ನಡೆಯುವ ಚುನಾವಣೆಗೆ ಗೈರಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಜೆಡಿಎಸ್ನ ಮಂಜುಳಾ ನಾರಾಯಣಸ್ವಾಮಿ ಹಾಗೂ ದೇವದಾಸ್ ಈಗಾಗಲೇ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ಚುನಾವಣೆಗೆ ಗೈರಾಗುವ ಮೂಲಕ ಬಿಜೆಪಿಗೆ ವರದಾನವಾಗುವ ಸಾಧ್ಯತೆ ಇದೆ.
ಈಗಾಗಲೇ ಸಂಖ್ಯಾಬಲದಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದೆ. ಪೂರ್ವನಿಗದಿತ ಸಭೆ ಹಿನ್ನೆಲೆ ಬಿಜೆಪಿಯ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಸದಾನಂದಗೌಡ ಅವರು ಚುನಾವಣೆಗೆ ಬರುವ ಸಾಧ್ಯತೆ ಕಡಿಮೆ.
ಇನ್ನು ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು ಬೆಳಗ್ಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ.