ಕರ್ನಾಟಕ

karnataka

By

Published : May 24, 2020, 10:59 AM IST

ETV Bharat / state

ನಿರ್ದೇಶಿತ ಕೊರೊನಾ ಬಂದ್: ಬಹುತೇಕ ಸ್ಥಬ್ದವಾದ ಸಿಲಿಕಾನ್ ಸಿಟಿ..!

ಇಂದು ಸಿಲಿಕಾನ್ ಸಿಟಿ ಬಹುತೇಕ ಸ್ಥಬ್ದವಾಗಿದ್ದು, ನಿರ್ದೇಶಿತ ಕೊರೊನಾ ಬಂದ್​​​​​ಗೆ ಬಹುತೇಕ ಎಲ್ಲಾ ರಂಗಗಳು ಬೆಳಗ್ಗೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ಪವಿತ್ರ ರಂಜಾನ್ ಹಬ್ಬದ ಆಚರಣೆಯ ಗಂಧ ಗಾಳಿಯೂ ಈ ಬಂದ್ ಭರಾಟೆಗೆ ತಣ್ಣಗಾಗಿದೆ.

Bangalore Curfew
ಬಹುತೇಕ ಸ್ಥಬ್ದವಾದ ಸಿಲಿಕಾನ್ ಸಿಟಿ

ಬೆಂಗಳೂರು: ನಿರ್ದೇಶಿತ ಕೊರೊನಾ ಬಂದ್​​​​​ಗೆ ಬಹುತೇಕ ಎಲ್ಲಾ ರಂಗಗಳು ಬೆಳಗ್ಗೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ವಾಹನ ಸಂಚಾರವಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿವೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಅಗತ್ಯ ವಸ್ತುಗಳ ಚಲಾವಣೆ ಹೊರತುಪಡಿಸಿದರೆ ಅಕ್ಷರಶಃ ಎಲ್ಲ ಸೇವೆಗಳೂ ಬೆಳಗ್ಗೆಯೇ ಅಲಭ್ಯತೆಯ ಮುನ್ಸೂಚನೆ ನೀಡುತ್ತಿವೆ.

ಬಹುತೇಕ ಸ್ಥಬ್ದವಾದ ಸಿಲಿಕಾನ್ ಸಿ

ಸಿಲ್ಕ್​​​ಬೋರ್ಡ್, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ​​​​ಸಿಟಿ, ಹೆಬ್ಬಗೋಡಿ ಹಾಗೂ ಚಂದಾಪುರ ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿಯೂ ಖಾಲಿಯಾಗಿ ಉದ್ದನೆಯ ರಸ್ತೆಯಷ್ಟೇ ಮಲಗಿದಂತೆ ಕಂಡಿದೆ. ಹುಳಿಮಾವು, ಗೊಟ್ಟಿಗೆರೆ, ಬನ್ನೇರುಘಟ್ಟ, ಜಿಗಣಿ, ಆನೇಕಲ್, ಸರ್ಜಾಪುರ ಸೇರಿದಂತೆ ಎಲ್ಲೆಡೆ ಲಾಕ್​​​ಡೌನ್ ಆಗಿದ್ದು, ಸಂಪೂರ್ಣ ನಗರ-ಗ್ರಾಮೀಣ ಭಾಗಗಳೂ ಮುಚ್ಚಿವೆ.

ಅದರಲ್ಲೂ ಪವಿತ್ರ ರಂಜಾನ್ ಹಬ್ಬದ ಗಂಧ ಗಾಳಿಯೂ ಈ ಬಂದ್ ಭರಾಟೆಗೆ ತಣ್ಣಗಾಗಿದೆ. ಇನ್ನೂ ಬಿಸಿಲೇರಿದ ಹಾಗೆ ವಾಹನ ಓಡಾಡಬಹುದೆಂಬ ಊಹೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details