ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಶಕ್ತಿಸೌಧಕ್ಕೆ ಪೊಲೀಸರು ಭಿಗಿ ಭದ್ರತೆ ಒದಗಿಸಿದ್ದಾರೆ.
ರೈತರು ವಿಧಾನಮಂಡಲಕ್ಕೆ ಮುತ್ತಿಗೆ ಹಾಕು ಸಾಧ್ಯತೆ...ಪೊಲೀಸರಿಂದ ಬಿಗಿ ಬಂದೋಬಸ್ತು ಪ್ರತಿಭಟನೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಆದೇಶದ ಮೇರೆಗೆ ವಿಧಾನಸೌಧದ ಎರಡು ಕಿಲೋಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು, ಬೆಳಗ್ಗೆ 06 ರಿಂದ ಮಧ್ಯರಾತ್ರಿ 12ಗಂಟೆವರೆಗೂ ನಿಷೇಧಾಜ್ಞೆ ವಿಧಿಸಲಾಗಿದೆ. ಕೇಂದ್ರ ವಲಯ ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿ, 6 ಇನ್ಸ್ಪೆಕ್ಟರ್ ಸೇರಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿಧಾನಸೌಧದದ ಒಳಗೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಇರಲಿದೆ.
ಅಲ್ಲದೇ ವಾಹನಗಳಿಗೂ ಪಾಸ್ ಕಡ್ದಾಯಗೊಳಿಸಿರುವ ಪೊಲೀಸರು ಕೆಂಗಲ್ ಗೇಟ್, ಎಲ್ಹೆಚ್ ಗೇಟ್, ವಿಕಾಸಸೌಧ ಎಂಟ್ರಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ವಿಧಾನಸೌಧ ಸುತ್ತಮುತ್ತ ಟ್ರಾಫಿಕ್ ಜಾಮ್ ಮತ್ತು ಅನಧಿಕೃತ ಪಾರ್ಕಿಂಗ್ ಮಾಡದಂತೆ ತಡೆಯಲು ಸಂಚಾರಿ ಪೊಲೀಸರು ನಿಗಾವಹಿಸಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ರೈತರ ಆಗಮನ:
ವಿಧಾನಮಂಡಲ ಅಧಿವೇಶನ ಇಂದಿನಿಂದ ಪ್ರಾರಂಭವಾಗಲಿದ್ದು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆಯಿದೆ. ಇಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಜಾಥ ನಡೆಯಲಿದ್ದು, ಇದರಲ್ಲಿ 10 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನಾ ಭಾಗಿಯಾಗಲಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈತರು ಪ್ರತಿಭಟನೆಗಾಗಿ ಸೇರುತ್ತಿದ್ದಾರೆ.
ರೈಲ್ವೆ ನಿಲ್ದಾಣ, ಮೌರ್ಯ ವೃತ್ತ, ಫ್ರೀಡಂ ಪಾರ್ಕ್, ಕೆ.ಆರ್. ವೃತ್ತದ ಮೂಲಕ ವಿಧಾನಸೌದಕ್ಕೆ ಪ್ರತಿಭಟನಾ ಜಾಥ ಸಾಗಲಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಒಟ್ಟು 10 ಕೆಎಸ್ಆರ್ಪಿ ತುಕಡಿಗಳಿಂದ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಮೆಜೆಸ್ಟಿಕ್ ನಿಲ್ದಾಣದ ಬಳಿ 5 ಕೆಎಸ್ಆರ್ಪಿ, ಮೌರ್ಯ ವೃತ್ತದ ಬಳಿ 5 ಕೆಎಸ್ಆರ್ಪಿ ಡಿಸಿಪಿ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ರೈತರ ಬೇಡಿಕೆಗಳೇನು..?
1. ಉತ್ತರ ಕರ್ನಾಟಕದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಬೇಕು.
2.ಎಕರೆಗೆ 25 ಸಾವಿರದಂತೆ ಪರಿಹಾರ ಕೊಡಬೇಕು.
3.ಪ್ರವಾಹದಲ್ಲಿ ಪ್ರಾಣ ಕಳೆಕೊಂಡವರಿಗೆ 25 ಲಕ್ಷ ಪರಿಹಾರ ಕೊಡಬೇಕು.
4.ನಷ್ಟವಾದ ಕೃಷಿ ಭೂಮಿಗೆ ಪರಿಹಾರ ಕೊಡಬೇಕು, ಪರ್ಯಾಯ ಭೂಮಿ ಕೊಡಬೇಕು.
5. ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು.
6.ಬ್ಯಾಂಕ್ ಗಳು ಪ್ರವಾಹದಿಂದ ತೊಂದರೆಗೆ ಒಳಗಾದ ರೈತರಿಗೆ ಸಾಲದ ನೋಟಿಸ್ನ್ನು ನೀಡೋದನ್ನು ನಿಲ್ಲಿಸಬೇಕು.