ಕರ್ನಾಟಕ

karnataka

ETV Bharat / state

ಇಂದು ರಾಷ್ಟ್ರಾದ್ಯಂತ ಲಾರಿ ಮುಷ್ಕರ; ರಾಜ್ಯದಲ್ಲಿ ಸ್ತಬ್ಧವಾಗಲಿವೆ 6 ಲಕ್ಷಕ್ಕೂ ಹೆಚ್ಚು ಲಾರಿಗಳು! - ಲಾರಿ ಮುಷ್ಕರ ಕರೆದ ಲಾರಿ ಮಾಲೀಕರು

ರಾಷ್ಟ್ರವ್ಯಾಪಿ ನಡೆಯುತ್ತಿರುವ ಮುಷ್ಕರಕ್ಕೆ ರಾಜ್ಯದ ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಸ್ತಬ್ಧವಾಗಲಿವೆ.

State lorry owners call for strike, Lorry strike, Lorry strike news, National wide lorry strike, ರಾಷ್ಟ್ರಾದ್ಯಂತ ಲಾರಿ ಮುಷ್ಕರ, ರಾಷ್ಟ್ರಾದ್ಯಂತ ಲಾರಿ ಮುಷ್ಕರ ಸುದ್ದಿ, ಲಾರಿ ಮುಷ್ಕರ, ಲಾರಿ ಮುಷ್ಕರ ಕರೆದ ಲಾರಿ ಮಾಲೀಕರು,
ಇಂದು ರಾಷ್ಟ್ರಾದ್ಯಂತ ಲಾರಿ ಮುಷ್ಕರ

By

Published : Feb 26, 2021, 5:56 AM IST

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಲಾರಿ ಮಾಲೀಕರು ತತ್ತರಿಸಿ ಹೋಗಿದ್ದು, ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಇಂದು ದೇಶವ್ಯಾಪಿ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಇಂದು ರಾಷ್ಟ್ರಾದ್ಯಂತ ಲಾರಿ ಮುಷ್ಕರ

ರಾಷ್ಟ್ರೀಯ ಟ್ರೇಡರ್ಸ್ ಯೂನಿಯನ್ ವತಿಯಿಂದ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ, ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿದೆ. ಇಂದು ರಾಜ್ಯದಲ್ಲಿ ಲಾರಿಗಳು ರೋಡಿಗೆ ಇಳಿಯಲ್ಲ ಎಂದು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟ್ ಫೆಡರೇಷನ್ ತಿಳಿಸಿದೆ.

ಕೇಂದ್ರ ಸರ್ಕಾರದ ಜಿ.ಎಸ್.ಟಿ, ವೇ ಬಿಲ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸುತ್ತಿದ್ದೇವೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಈಟಿವಿ ಭಾರತಕ್ಕೆ ತಿಳಿಸಿದರು.

ಈ ಮುಷ್ಕರಕ್ಕೆ ರಾಜ್ಯದ ಸುಮಾರು ಆರು ಲಕ್ಷಕ್ಕೂ ಅಧಿಕ ಲಾರಿಗಳು ಸ್ತಬ್ಧವಾಗಲಿವೆ. ತಮ್ಮ ವಹಿವಾಟು ಸ್ಥಗಿತಗೊಳಿಸಿ ಬಂದ್ ಮಾಡಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ. ಸರ್ಕಾರ ಬೇಡಿಕೆಗಳನ್ನ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಿಂತನೆ ನಡೆದಿದೆ ಎಂದು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು ಬೆಳಗ್ಗೆಯಿಂದ ಲಾರಿ ಸಂಚಾರ ಬಂದ್ ಮಾಡಲಾಗುತ್ತಿದೆ. ಲಾರಿ ಸಂಚಾರ ಸ್ಥಗಿತದಿಂದ ಅಗತ್ಯ ವಸ್ತುಗಳ ಪೂರೈಕೆ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಾಗಿದೆ.

ABOUT THE AUTHOR

...view details