ಬೆಂಗಳೂರು:ಕೋವಿಡ್ ಮೂರನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ 70ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,874ಕ್ಕೆ ಏರಿಕೆಯಾಗಿದೆ. ಕಳೆದ 2-3 ವಾರದಲ್ಲಿ 50 ದಾಟಿದ್ದ ಸಾವಿನ ಸಂಖ್ಯೆ ಇಂದು ದಿಢೀರ್ ಏರಿಕೆ ಕಂಡಿದೆ.
ರಾಜ್ಯದಲ್ಲಿಂದು 1,72,062 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 33,337 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 37,57,031ಕ್ಕೆ ಏರಿಕೆಯಾಗಿದೆ. ಈ ದಿನ 69,902 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 34,65,995 ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 2,52,132 ಪ್ರಕರಣಗಳು ಸಕ್ರಿವಾಗಿವೆ.
ಇವತ್ತಿನ ಪಾಸಿಟಿವ್ ರೇಟ್ 19.37% ರಷ್ಟಿದ್ದರೆ, ಡೆತ್ ರೇಟ್ 0.20% ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 1089 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 412 ವಿದೇಶಿಗರು ಹೈ ರಿಸ್ಕ್ ದೇಶದಿಂದ ಆಗಮಿಸಿದ್ದಾರೆ.
ರಾಜಧಾನಿ ಬೆಂಗಳೂರಲ್ಲಿ 16,586 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16,98,260ಕ್ಕೆ ಏರಿದೆ. 46,050 ಜನರು ಡಿಸ್ಚಾರ್ಜ್ ಆಗಿದ್ದು, 15,50,991 ಮಂದಿ ಗುಣಮುಖರಾಗಿದ್ದಾರೆ. 13 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,567 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳು 1,30,701ರಷ್ಟಿವೆ.
ರೂಪಾಂತರಿ ವೈರಸ್ ಅಪಡೇಟ್ಸ್:
ಅಲ್ಪಾ- 156