ಕರ್ನಾಟಕ

karnataka

ETV Bharat / state

ಇಂದು 18 ಜನರಲ್ಲಿ ಹೊಸದಾಗಿ ಕೊರೊನಾ ಪಾಸಿಟಿವ್... ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 445 ಕ್ಕೆ ಹೆಚ್ಚಳ

ಬೆಂಗಳೂರು 10, ವಿಜಯಪುರ 2, ಹುಬ್ಬಳ್ಳಿ-ಧಾರವಾಡ 2, ದಕ್ಷಿಣ ಕನ್ನಡ 1,‌ ಮಂಡ್ಯ 2 , ಕಲಬುರಗಿ 1 ಕೊರೊನಾ ಪ್ರಕರಣಗಳು ಇಂದು ಹೊಸದಾಗಿ ದೃಢಪಟ್ಟಿವೆ.

Today, 18 people are newly infected with coronavirus, increasing to 445
ಇಂದು 18 ಜನರಲ್ಲಿ ಹೊಸದಾಗಿ ಕೊರೊನಾ ಪಾಸಿಟಿವ್

By

Published : Apr 23, 2020, 7:43 PM IST

ಬೆಂಗಳೂರು: ರಾಜ್ಯದಲ್ಲಿ ಇಂದು‌ ಹೊಸದಾಗಿ 18 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 445 ಕ್ಕೆ ತಲುಪಿದೆ.

ಬೆಂಗಳೂರು 10, ವಿಜಯಪುರ 2, ಹುಬ್ಬಳ್ಳಿ-ಧಾರವಾಡ 2, ದಕ್ಷಿಣ ಕನ್ನಡ 1,‌ ಮಂಡ್ಯ 2 , ಕಲಬುರಗಿ 1 ಪ್ರಕರಣಗಳು ಇಂದು ಹೊಸದಾಗಿ ದೃಢಪಟ್ಟಿವೆ. ಈವರೆಗೆ ಒಟ್ಟು 17 ಸೋಂಕಿತರು ಮೃತಪಟ್ಟಿದ್ದರೆ, 145 ರೋಗಿಗಳು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ರೋಗಿ-101, 273, 349, 369, 409 ಐದು ರೋಗಿಗಳನ್ನು ಐಸಿಯುವಲ್ಲಿ ಇರಿಸಿ‌ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ನಾಲ್ಕು ದಿನಗಳಲ್ಲಿ ಕೇವಲ ಎರಡು ಪ್ರಕರಣ ಮಾತ್ರ ಬೆಂಗಳೂರಿನಲ್ಲಿ ದೃಢಪಟ್ಟಿದ್ದು, ಇಂದು 10 ಪ್ರಕರಣ ಕಂಡು ಬರುವ ಮೂಲಕ ಮತ್ತೆ ಆತಂಕ‌ ಹೆಚ್ಚಾಗುವಂತೆ ಮಾಡಿದೆ.

ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಬಂದಿರುವ 10 ರಲ್ಲಿ 9 ಪ್ರಕರಣ ಒಬ್ಬರೇ ವ್ಯಕ್ತಿಯ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದೆ. ರೋಗಿ ಸಂಖ್ಯೆ 419 ರ ಸಂಪರ್ಕಿತರೇ ಈ ಎಲ್ಲಾ ಕೊರೊನಾ ಸೋಂಕಿತರಾಗಿದ್ದಾರೆ. ಇನ್ನೊಬ್ಬರು ರೋಗಿ- 252 ರ ಸಂಪರ್ಕಿತ.

ಟ್ರಾವೆಲ್ ಹಿಸ್ಟರಿ:
ರೋಗಿ-428: ವಿಜಯಪುರದ 32 ವರ್ಷದ ಯುವಕ, ರೋಗಿ-221 ರ ಸಂಪರ್ಕ, ವಿಜಯಪುರದ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ-429: ವಿಜಯಪುರದ 25 ವರ್ಷದ ಮಹಿಳೆ,ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ವಿಜಯಪುರದ ಪ್ರತ್ಯೇಕ ಆಸ್ಪತ್ರೆಯಲ್ಲಿ ಮುಂದುವರಿದಿದೆ.

ರೋಗಿ-430: ಹುಬ್ಬಳ್ಳಿ-ಧಾರವಾಡ 30 ವರ್ಷದ ಮಹಿಳೆ, ರೋಗಿ-236 ರ ಸಂಪರ್ಕ, ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ-431: ಹುಬ್ಬಳ್ಳಿ-ಧಾರವಾಡ 13 ವರ್ಷದ ಬಾಲಕಿ, ರೋಗಿ-236 ರ ಸಂಪರ್ಕ, ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ-432: ದಕ್ಷಿಣ ಕನ್ನಡದ ಬಂಟ್ವಾಳದ 78 ವರ್ಷದ ವೃದ್ಧ, ರೋಗಿ-390 ರ ಸಂಪರ್ಕ, ದಕ್ಷಿಣ ಕನ್ನಡ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ರೋಗಿ-433: ಬೆಂಗಳೂರು ನಗರ 30 ವರ್ಷದ ಪುರುಷ,ರೋಗಿ-419 ರ ಸಂಪರ್ಕ, ಬೆಂಗಳೂರಿನ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ರೋಗಿ-434: ಬೆಂಗಳೂರು ನಗರ 30 ವರ್ಷದ ಪುರುಷ,ರೋಗಿ-419 ರ ಸಂಪರ್ಕ, ಬೆಂಗಳೂರಿನ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಲಾಗಿದೆ

ರೋಗಿ-435: ಬೆಂಗಳೂರು ನಗರ 22 ವರ್ಷದ ಪುರುಷ, ರೋಗಿ-419 ರ ಸಂಪರ್ಕ, ಬೆಂಗಳೂರಿನ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ

ರೋಗಿ-436: ಬೆಂಗಳೂರು ನಗರ 40 ವರ್ಷದ ಪುರುಷ, ರೋಗಿ-419 ರ ಸಂಪರ್ಕ, ಬೆಂಗಳೂರಿನ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ-437: ಬೆಂಗಳೂರು ನಗರ 30 ವರ್ಷದ ಪುರುಷ,ರೋಗಿ-419 ರ ಸಂಪರ್ಕ, ಬೆಂಗಳೂರಿನ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಲಾಗಿದೆ

ರೋಗಿ-438: ಬೆಂಗಳೂರು ನಗರ 25 ವರ್ಷದ ಪುರುಷ,ರೋಗಿ-419 ರ ಸಂಪರ್ಕ, ಬೆಂಗಳೂರಿನ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಗೆ ದಾಖಲು

ರೋಗಿ-439: ಬೆಂಗಳೂರು ನಗರ 37 ವರ್ಷದ ಪುರುಷ,ರೋಗಿ-419 ರ ಸಂಪರ್ಕ, ಬೆಂಗಳೂರಿನ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ

ರೋಗಿ-440: ಬೆಂಗಳೂರು ನಗರ 43 ವರ್ಷದ ಪುರುಷ, ರೋಗಿ-419 ರ ಸಂಪರ್ಕ, ಬೆಂಗಳೂರಿನ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ-441: ಬೆಂಗಳೂರು ನಗರ 24 ವರ್ಷದ ಪುರುಷ, ರೋಗಿ-419 ರ ಸಂಪರ್ಕ, ಬೆಂಗಳೂರಿನ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಯಲ್ಲಿ

ರೋಗಿ-442: ಮಂಡ್ಯದ 47 ವರ್ಷದ ಪುರುಷ,ರೋಗಿ-171 ಮತ್ತು 371 ರ ಸಂಪರ್ಕ, ಮಂಡ್ಯದ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ರೋಗಿ-443: ಮಂಡ್ಯದ ಮಳವಳ್ಳಿಯ 28 ವರ್ಷದ ಮಹಿಳೆ,ರೋಗಿ-179 ರ ಸಂಪರ್ಕ, ಮಂಡ್ಯದ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಲಾಗಿದೆ

ರೋಗಿ-444: ಬೆಂಗಳೂರು ನಗರ 41 ವರ್ಷದ ಪುರುಷ, ರೋಗಿ-252 ರ ಸಂಪರ್ಕ, ಬೆಂಗಳೂರಿನ ಪ್ರತ್ಯೇಕ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೋಗಿ-445: ಕಲಬುರಗಿಯ 32 ವರ್ಷದ ವ್ಯಕ್ತಿ, ರೋಗಿ-413 ರ ಸಂಪರ್ಕಿತ, ಕಲಬುರಗಿ ಪ್ರತ್ಯೇಕ ಆಸ್ಪತ್ರೆಗೆ ದಾಖಲು


ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ:

ಬೆಂಗಳೂರು ನಗರ:101
ಮೈಸೂರು: 88
ಬೆಳಗಾವಿ: 43
ವಿಜಯಪುರ: 37
ಕಲಬುರಗಿ: 36
ಬಾಗಲಕೋಟೆ: 21
ಚಿಕ್ಕಬಳ್ಳಾಪುರ: 16
ದಕ್ಷಿಣ ಕನ್ನಡ: 16
ಬೀದರ್: 16
ಮಂಡ್ಯ: 14
ಬಳ್ಳಾರಿ: 13
ಬೆಂಗಳೂರು ಗ್ರಾಮಾಂತರ: 12
ಉತ್ತರಕನ್ನಡ: 11
ಧಾರವಾಡ: 9
ಗದಗ: 4
ಉಡುಪಿ: 3
ದಾವಣಗೆರೆ:2
ತುಮಕೂರು: 2
ಚಿತ್ರದುರ್ಗ:1
ಕೊಡಗು: 1

ABOUT THE AUTHOR

...view details