ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನೆಲ್ಲೇ ಹಾಸಿಗೆ, ಆಕ್ಸಿಜನ್ ಹಿಡಿದು ಲಸಿಕೆ, ಔಷಧವರೆಗೂ ಕೊರತೆ ಶುರುವಾಗಿದೆ.
ಮುಖ್ಯವಾಗಿ ರಾಜ್ಯದ ಹಲವು ಖಾಸಗಿ ಆಸ್ಪತ್ರೆಯಲ್ಲಿ ರೆಮೆಡಿಸ್ವಿರ್ ಔಷಧ ಕೊರತೆ ಎದುರಾಗಿದೆ. ಈ ನಿಟ್ಟಿನಲ್ಲಿ ಸುಮಾರು 33 ಆಸ್ಪತ್ರೆಗಳು ರೆಮೆಡಿಸ್ವಿರ್ ಔಷಧ ಪೂರೈಕೆಗೆ ಬೇಡಿಕೆ ಇಟ್ಟಿದ್ದಾವೆ. ಹೀಗಾಗಿ, ಇಂದು ಪ್ರತಿ ಆಸ್ಪತ್ರೆಗೆ 100 ವೈಯಲ್ಗಳಷ್ಟು ಔಷಧ ಸರಬರಾಜು ಮಾಡಲಾಗುವುದು ಅಂತ ಸಚಿವ ಸುಧಾಕರ್ ಟೀಟ್ವ್ ಮಾಡಿದ್ದಾರೆ.
ರಾಜ್ಯಕ್ಕೆ ಬಂತು 1.4 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ
ಸೋಂಕು ಹೆಚ್ಚುತ್ತಿರುವ ಕಾರಣ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯು ಹೆಚ್ಚಾಗುತ್ತಿದ್ದು, ಹಲವೆಡೆ ಲಸಿಕೆ ಖಾಲಿ ಎಂಬ ಮಾತು ಕೇಳಿಬರುತ್ತಿತ್ತು.ಈ ನಿಟ್ಟಿನಲ್ಲಿ ನಿನ್ನೆ ರಾತ್ರಿ 8:30ರ ವೇಳೆಗೆ ರಾಜ್ಯಾದ್ಯಂತ ಒಟ್ಟು 67,18,709 ಡೋಸ್ ಲಸಿಕೆ ವಿತರಿಸಲಾಗಿದ್ದು, ನಿನ್ನೆ ಒಂದೇ ದಿನ 2,31,870 ಡೋಸ್ ಲಸಿಕೆ ವಿತರಿಸಲಾಗಿದೆ.
ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಮತ್ತೊಂದು ಕಂತಿನಲ್ಲಿ ಸುಮಾರು 1.4 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ರಾಜ್ಯಕ್ಕೆ ಬಂದು ತಲುಪಿದೆ ಅಂತ ಸಚಿವರು ಮಾಹಿತಿ ನೀಡಿದ್ದಾರೆ..