ಕರ್ನಾಟಕ

karnataka

ETV Bharat / state

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿ ತನಿಖೆ ಬಹುತೇಕ ಪೂರ್ಣ.. ವರದಿಯಲ್ಲೇನಿರಬಹುದು? - undefined

ವಿದ್ಯಾರ್ಥಿನಿ ಆತ್ಮಹತ್ಯೆ ಘಟನೆ ನಡೆದಾಗಿನಿಂದ ಸುಮಾರು 15 ದಿನಗಳ ಕಾಲ ರಾಯಚೂರಿನಲ್ಲಿ ಮೊಕ್ಕಾಂ ಹೂಡಿದ್ದ ಸಿಐಡಿ ತಂಡಕ್ಕೆ ಸುದರ್ಶನ್ ಮೃತ ವಿದ್ಯಾರ್ಥಿನಿಯನ್ನ ಪ್ರೀತಿಸುತ್ತಿದ್ದ ಅನ್ನೋ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ.

ಸದ್ಯದಲ್ಲೇ ನ್ಯಾಯಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ

By

Published : May 14, 2019, 12:36 PM IST

ಬೆಂಗಳೂರು : ರಾಯಚೂರಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬಹುತೇಕ ತನಿಖೆಯನ್ನ ಪೂರ್ಣಗೊಳಿಸಿದ್ದಾರೆ. ಸದ್ಯದಲ್ಲೇ ನ್ಯಾಯಾಲಯಕ್ಕೆ ಈ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ಸಿಐಡಿ ಉನ್ನತ ಮೂಲಗಳು ತಿಳಿಸಿವೆ

ವಿದ್ಯಾರ್ಥಿನಿ ಆತ್ಮಹತ್ಯೆ ಘಟನೆ ನಡೆದಾಗದಿಂದ ಸುಮಾರು 15 ದಿನಗಳ ಕಾಲ ರಾಯಚೂರಿನಲ್ಲಿ ಮೊಕ್ಕಾಂ ಹೂಡಿದ್ದ ಸಿಐಡಿ ತಂಡಕ್ಕೆ ತನಿಖೆ ವೇಳೆ ಮಹತ್ವದ ಅಂಶಗಳು ಕಂಡು ಬಂದಿವೆ. ಯುವತಿಯನ್ನ ಸುದರ್ಶನ್ ಪ್ರೀತಿಸುತ್ತಿದ್ದ ಅನ್ನೋ ವಿಚಾರವೂ ಬಹಿರಂಗವಾಗಿದೆ. ಕೆಲ ವರ್ಷಗಳಿಂದ ಯುವತಿಯನ್ನ ಪ್ರೀತಿಸುತ್ತಿದ್ದ ಸುದರ್ಶನ, ಇತ್ತೀಚೆಗಷ್ಟೇ ವಿದ್ಯಾರ್ಥಿನಿ ಮೇಲೆ ಅನುಮಾನ ಇಟ್ಟುಕೊಂಡು ಜಗಳವಾಡಿದ್ದ ಎನ್ನಲಾಗಿದೆ.

ಮೃತ ಯುವತಿ ಯಾರ ಜೊತೆ ಮಾತನಾಡಿದ್ರೂ ಸುದರ್ಶನ್​ ಅನುಮಾನ ಪಡುತ್ತಿದ್ದ ಎಂಬ ಸ್ಪೋಟಕ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ. ಇನ್ನು ಆ ಯುವತಿ ಕಾಲ್ ಡಿಟೇಲ್ಸ್ ಗಳನ್ನ ಎಫ್ ಎಸ್ ಎಲ್ ತನಿಖೆಗೆ ಕಳುಹಿಸಲಾಗಿದೆ. ಎಫ್​ಎಸ್​ಎಲ್​ ರಿಪೋರ್ಟ್ ತನಿಖಾ ತಂಡಕ್ಕೆ ಸಿಕ್ಕ ತಕ್ಷಣವೇ ನ್ಯಾಯಾಲಯಕ್ಕೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.

For All Latest Updates

TAGGED:

ABOUT THE AUTHOR

...view details