ಕರ್ನಾಟಕ

karnataka

ETV Bharat / state

ವಿದ್ಯುತ್‌ ಶುಲ್ಕ ಪಾವತಿಸಲು ಬಿಡಬ್ಲ್ಯೂಎಸ್‌ಎಸ್‌ಬಿ, ಬಿಡಿಎ, ಬಿಬಿಎಂಪಿಗೆ ಬೆಸ್ಕಾಂ ನೋಟಿಸ್‌ - ಬೀದಿ ದೀಪ ಸ್ಥಾವರ

ನಾಲ್ಕೂ ಉಪ ವಿಭಾಗಗಳಿಗೆ ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿರುವ ಸರಕಾರಿ ಸಂಸ್ಥೆಗಳ ಪೈಕಿ ಬಿಡಬ್ಲ್ಯೂಎಸ್‌ಎಸ್‌ಬಿ ಅತೀ ಹೆಚ್ಚು 65.09 ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿದ್ದು, ಬಿಬಿಎಂಪಿ ನೀರು ಸರಬರಾಜು ವಿಭಾಗ 54.53 ಕೋಟಿ ರೂ. ವಿದ್ಯುತ್‌ ಶುಲ್ಕ ಪಾವತಿಸಬೇಕಾಗಿದೆ.

to pay electricity charges bescom notice to b w s s b , b d a, bbmp
ವಿದ್ಯುತ್‌ ಶುಲ್ಕ ಪಾವತಿಸಲು ಬಿ. ಡಬ್ಲ್ಯೂ.ಎಸ್‌. ಎಸ್‌. ಬಿ, ಬಿ.ಡಿ.ಎ, ಬಿ.ಬಿ.ಎಂ.ಪಿಗೆ ಬೆಸ್ಕಾಂ ನೋಟಿಸ್‌

By

Published : Nov 17, 2022, 7:53 PM IST

ಬೆಂಗಳೂರು: ಕೋಟ್ಯಂತರ ರೂಪಾಯಿ ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿರುವ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಬಿಎಂಪಿ, ತೋಟಗಾರಿಕೆ ಇಲಾಖೆ, ಬಿ.ಡಿ.ಎ, ನಗರ ಸಭೆ ಮತ್ತು ಗ್ರಾಮಸಭೆಗಳಿಗೆ ಬೆಸ್ಕಾಂನ ಹೆಬ್ಬಾಳ ಮತ್ತು ಜಾಲಹಳ್ಳಿ ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್ಗಳು ಪ್ರತ್ಯೇಕ ನೋಟಿಸ್​​ ಜಾರಿಗೊಳಿಸಿದೆ.

ಬೆಸ್ಕಾಂನ ಹೆಬ್ಬಾಳ ವಿಭಾಗದ ವ್ಯಾಪ್ತಿಗೆ ಬರುವ ಉಪ ವಿಭಾಗಗಳಾದ ಗಂಗಾನಗರ (ಸಿ-4), ಕಾವಲಬೈರಸಂದ್ರ (ಸಿ-5), ಯಲಹಂಕ (ಸಿ-7) ಮತ್ತು ಸಹಕಾರನಗರ (ಸಿ -8) ಉಪ ವಿಭಾಗಗಳಿಗೆ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೀರು ಸರಬರಾಜು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್‌ ಬಾಕಿ ಸೆಪ್ಟೆಂಬರ್‌ ಅಂತ್ಯಕ್ಕೆ 131.18 ಕೋಟಿ ರೂಪಾಯಿ ಆಗಿದ್ದು, ಬಾಕಿ ಪಾವತಿಸಲು ಹೆಬ್ಬಾಳ ಕಾರ್ಯನಿರ್ವಾಹಕ ಇಂಜಿನಿಯರ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.

ನಾಲ್ಕೂ ಉಪ ವಿಭಾಗಗಳಿಗೆ ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿರುವ ಸರಕಾರಿ ಸಂಸ್ಥೆಗಳ ಪೈಕಿ ಬಿಡಬ್ಲ್ಯೂಎಸ್‌ಎಸ್‌ಬಿ ಅತೀ ಹೆಚ್ಚು 65.09 ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿದ್ದು, ಬಿಬಿಎಂಪಿ ನೀರು ಸರಬರಾಜು ವಿಭಾಗ 54.53 ಕೋಟಿ ರೂ. ವಿದ್ಯುತ್‌ ಶುಲ್ಕ ಪಾವತಿಸಬೇಕಾಗಿದೆ.

ಜಾಲಹಳ್ಳಿ ವಿಭಾಗ:ಹಾಗೆಯೇ ಬೆಸ್ಕಾಂನ ಜಾಲಹಳ್ಳಿ ವಿಭಾಗ ವ್ಯಾಪ್ತಿಯ ಉಪ ವಿಭಾಗಗಳಾದ ಜಾಲಹಳ್ಳಿ (ಸಿ 3), ವಿದ್ಯಾರಣ್ಯಪುರ (ಸಿ-9), ಮತ್ತು ಸೋಲದೇವನಹಳ್ಳಿ (ಎನ್‌ -9) ಉಪ ವಿಭಾಗಗಳಿಗೆ ಬಿಡಬ್ಲ್ಯೂಎಸ್​​ಎಸ್‌ಬಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ, ನಗರ ಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೀರು ಸರಬರಾಜು ಮತ್ತು ಬೀದಿ ದ್ವೀಪ ಸ್ಥಾವರಗಳ ವಿದ್ಯುತ್‌ ಬಾಕಿ ಅಕ್ವೋಬರ್‌ ಅಂತ್ಯಕ್ಕೆ 99.20 ಕೋಟಿ ರೂಪಾಯಿ ಇದ್ದು, ಬಾಕಿ ಪಾವತಿಸಲು ಕೋರಿ ಜಾಲಹಳ್ಳಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ನವೆಂಬರ್‌ 16 ರಂದು ನೋಟಿಸ್‌ ಜಾರಿಗೊಳಿಸಿದ್ದಾರೆ.

ವಿದ್ಯುತ್‌ ಬಾಕಿಯನ್ನು 7 ದಿನಗಳ ಒಳಗೆ ಬೆಸ್ಕಾಂಗೆ ಪಾವತಿಸಲು ಸೂಚನೆ: ವಿದ್ಯುತ್‌ ಬಾಕಿಯನ್ನು 7 ದಿನಗಳ ಒಳಗೆ ಬೆಸ್ಕಾಂಗೆ ಪಾವತಿಸಲು ಸೂಚಿಸಲಾಗಿದ್ದು, ತಪ್ಪಿದ್ದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎರಡೂ ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್​​ಗಳು ನೀಡಿರುವ ನೋಟಿಸ್‌ ನಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ 16 ಕಡೆ ಇಡಿ ದಾಳಿ: 80 ಬ್ಯಾಂಕ್ ಖಾತೆ ಸೀಜ್‌ ಮಾಡಿ 1 ಕೋಟಿ ಹಣ ಜಪ್ತಿ

ABOUT THE AUTHOR

...view details